ADVERTISEMENT

ಸಂಸ್ಕೃತ ವಿದ್ವಾಂಸ ಸದಾಶಿವ ಭಟ್ಟ ನಿಧನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 17:41 IST
Last Updated 12 ಫೆಬ್ರುವರಿ 2021, 17:41 IST
ಸಂಸ್ಕೃತ ವಿಧ್ವಾಂಸ ಸದಾಶಿವ ಭಟ್ಟ
ಸಂಸ್ಕೃತ ವಿಧ್ವಾಂಸ ಸದಾಶಿವ ಭಟ್ಟ   

ಶಿರಸಿ: ಹೆಸರಾಂತ ಸಂಸ್ಕೃತ ವಿದ್ವಾಂಸ ಸಿದ್ದಾಪುರ ತಾಲ್ಲೂಕಿನ ನೆಲೆಮಾವಿನ ಸದಾಶಿವ ಭಟ್ಟ (ಶಾಸ್ತ್ರಿ) (93) ಕುಮಟಾ ತಾಲ್ಲೂಕಿನ ಹೊಸಳ್ಳಿಯಲ್ಲಿ ಶುಕ್ರವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಸಂಸ್ಕೃತ ಅಧ್ಯಾಪಕರಾಗಿದ್ದ ಅವರಿಗೆ 2019ರಲ್ಲಿ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ 'ಮಹಾಮಹೋಪಾಧ್ಯಾಯ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿತ್ತು. ಚಂಪೂಕಾವ್ಯ ಸೇರಿದಂತೆ ಹಲವು ಸಂಸ್ಕೃತ ಗ್ರಂಥಗಳನ್ನು ಅವರು ರಚಿಸಿದ್ದರು. ರಾಜ್ಯದ ಹಲವು ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿ ಹೆಸರು ಮಾಡಿದ್ದರು. 1995ರಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT