ADVERTISEMENT

ಸಚಿವೆ ಲಕ್ಷ್ಮೀ ಬೌಲಿಂಗ್‌ಗೆ ಸಚಿವ ಸತೀಶ ಬೋಲ್ಡ್‌!

ಕ್ರಿಕೆಟ್ ಆಡಿ ಸಂಭ್ರಮಿಸಿದ ಸಚಿವರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 14:17 IST
Last Updated 6 ಫೆಬ್ರುವರಿ 2026, 14:17 IST
<div class="paragraphs"><p>ಬೆಳಗಾವಿಯಲ್ಲಿ ಶುಕ್ರವಾರ ನಡೆದ ಸರ್ಕಾರಿ ಶಾಲೆ ಮಕ್ಕಳ ಬಾಕ್ಸ್‌ ಕ್ರಿಕೆಟ್‌ ಮೈದಾನದ ಉದ್ಘಾಟನಾ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬ್ಯಾಟಿಂಗ್‌ ಮಾಡಿದರು. ಸಚಿವ ಸತೀಶ ಜಾರಕಿಹೊಳಿ ವಿಕೆಟ್‌ ಕೀಪಿಂಗ್‌ ನಿರ್ವಹಿಸಿದರು</p></div>

ಬೆಳಗಾವಿಯಲ್ಲಿ ಶುಕ್ರವಾರ ನಡೆದ ಸರ್ಕಾರಿ ಶಾಲೆ ಮಕ್ಕಳ ಬಾಕ್ಸ್‌ ಕ್ರಿಕೆಟ್‌ ಮೈದಾನದ ಉದ್ಘಾಟನಾ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬ್ಯಾಟಿಂಗ್‌ ಮಾಡಿದರು. ಸಚಿವ ಸತೀಶ ಜಾರಕಿಹೊಳಿ ವಿಕೆಟ್‌ ಕೀಪಿಂಗ್‌ ನಿರ್ವಹಿಸಿದರು

   

ಬೆಳಗಾವಿ: ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರು ಶುಕ್ರವಾರ ಕ್ರಿಕೆಟ್‌ ಆಡಿ ಖುಷಿಪಟ್ಟರು!

ಇಲ್ಲಿನ ಶ್ರೀನಗರದಲ್ಲಿ ನಿರ್ಮಿಸಿದ ಬಾಲಭವನದಲ್ಲಿ ಬಾಕ್ಸ್ ಕ್ರಿಕೆಟ್‌ ಮೈದಾನವನ್ನು ಸಚಿವ ಸತೀಶ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಈ ವೇಳೆ ಸಚಿವೆ ಲಕ್ಷ್ಮೀ ಬೌಲಿಂಗ್‌ ಮಾಡಿದರು. ನಾಲ್ಕು ಬೌಲ್‌ಗಳನ್ನು ಟಚ್ ಮಾಡಿದ ಸಚಿವ ಸತೀಶ ಐದನೇ ಬೌಲಿಗೆ ಬೋಲ್ಡ್‌ ಆದರು. ಆಗ ಸುತ್ತ ಸೇರಿದವರೆಲ್ಲ ಚಪ್ಪಾಳೆ ತಟ್ಟಿ ಸಚಿವೆಯನ್ನು ಅಭಿನಂದಿಸಿದರು.

ADVERTISEMENT

ಆಟದಲ್ಲಿ ಶಾಸಕ ಆಸಿಫ್‌ ಸೇಠ್‌ ವಿಕೆಟ್‌ ಕೀಪಿಂಗ್, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಬುಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಸೇರಿ ಎಲ್ಲರೂ ಫೀಲ್ಡಿಂಗ್‌ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.