ಬೆಂಗಳೂರು: ‘ಸವಿತಾ ಮಹರ್ಷಿ ಜಯಂತಿ’ಯನ್ನು ಇನ್ನು ಮುಂದೆ ಸರ್ಕಾರವೇ ಆಚರಿಸಲಿದೆ. ಬರುವ ವರ್ಷದಿಂದ ರಥ ಸಪ್ತಮಿ ದಿನದಂದು ಆಚರಿಸಲು ತೀರ್ಮಾನಿಸಿದೆ.
ಈ ಸಂಬಂಧ ಸೆ. 20ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಚರಿಸುವಂತೆ ಸೂಚಿಸಿ ರುವ ಇದಕ್ಕಾಗಿ ₹ 69 ಲಕ್ಷ ಅನುದಾನ ಬಿಡುಗಡೆ ಮಾಡಿದೆ.
ಬೇಡಿಕೆ ಈಡೇರಿಸಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಸವಿತಾ ಕ್ಷೇಮಾಭಿವೃದ್ಧಿ ಮತ್ತು ಜಾಗೃತಿ ವೇದಿಕೆ ಉಪಾಧ್ಯಕ್ಷ ಮಾವಳ್ಳಿ ಕೃಷ್ಣ ತಿಳಿಸಿದ್ದಾರೆ.
‘ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯ’
ಕೋಲಾರ: ‘ಡೀಸೆಲ್ ಬೆಲೆ ಹೆಚ್ಚಳ ದಿಂದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಸಂಸ್ಥೆಗೆ ₹ 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಹಾಗಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ’ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಉಮಾಶಂಕರ್ ಹೇಳಿದರು. ಸಂಸ್ಥೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಏಪ್ರಿಲ್‌ನಿಂದ ಈವರೆಗೆ ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ ₹ 9 ಹೆಚ್ಚಳವಾಗಿದೆ. ಲೀಟರ್‌ಗೆ ₹ 1 ಏರಿಕೆಯಾದರೂ ಸಂಸ್ಥೆಗೆ ದಿನಕ್ಕೆ ₹ 2.50 ಕೋಟಿ ನಷ್ಟವಾಗುತ್ತದೆ. ನಾಲ್ಕು ವರ್ಷದಿಂದ ಪ್ರಯಾಣ ದರ ಹೆಚ್ಚಿಸಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.