ADVERTISEMENT

ಕ್ವಾರಂಟೈನ್‌ ಮುದ್ರೆಯಿದ್ದ ವ್ಯಕ್ತಿ ಸಾವು: ಎರಡು ಗಂಟೆ ರಸ್ತೆಯಲ್ಲೇ ಉಳಿದ ಶವ

​ಪ್ರಜಾವಾಣಿ ವಾರ್ತೆ
Published 13 ಮೇ 2020, 11:17 IST
Last Updated 13 ಮೇ 2020, 11:17 IST
ಹೃದಯಾಘಾತದಿಂದ ಮೃತಪಟ್ಟ ಕರುಣಾಕರ ಶೆಟ್ಟಿ ಅವರ ಶವವನ್ನು ಗೋಕರ್ಣ ಸಮೀಪದ ಹಿರೇಗುತ್ತಿಯಲ್ಲಿ ರಸ್ತೆ ಬದಿಯಲ್ಲಿ ಇಟ್ಟು ಕುಟುಂಬದ ಸದಸ್ಯರು ಸಹಾಯಕ್ಕಾಗಿ ಅಂಗಲಾಚಿದರು
ಹೃದಯಾಘಾತದಿಂದ ಮೃತಪಟ್ಟ ಕರುಣಾಕರ ಶೆಟ್ಟಿ ಅವರ ಶವವನ್ನು ಗೋಕರ್ಣ ಸಮೀಪದ ಹಿರೇಗುತ್ತಿಯಲ್ಲಿ ರಸ್ತೆ ಬದಿಯಲ್ಲಿ ಇಟ್ಟು ಕುಟುಂಬದ ಸದಸ್ಯರು ಸಹಾಯಕ್ಕಾಗಿ ಅಂಗಲಾಚಿದರು   

ಗೋಕರ್ಣ: ಮಹಾರಾಷ್ಟ್ರದ ರತ್ನಗಿರಿಯಿಂದ ಪಾಸ್ಪಡೆದು ಮಂಗಳೂರಿಗೆ ಹೊರಟ ಕುಟುಂಬದ ಸದಸ್ಯರೊಬ್ಬರು ಹಿರೇಗುತ್ತಿಯ ಬಳಿ ಬುಧವಾರ ಹೃದಯಾಘಾತದಿಂದಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕರುಣಾಕರ ಶೆಟ್ಟಿ (75) ಎಂದು ಗುರುತಿಸಲಾಗಿದೆ. ಖಾಸಗಿ ವಾಹನದಲ್ಲಿ ಐವರು ಪ್ರಯಾಣಿಸುತ್ತಿದ್ದರು. ಹಿರೇಗುತ್ತಿಯ ಬಳಿ ವಾಹನ ಕೆಟ್ಟು ನಿಂತಾಗಅವರಿಗೆಏಕಾಏಕಿ ಎದೆ ನೋವು ಕಾಣಿಸಿಕೊಂಡಿತು. ವಾಹನದಲ್ಲಿ ಜೊತೆಗಿದ್ದವರು ಚಿಕಿತ್ಸೆ ಕೊಡಿಸಲು ಪ್ರಯತ್ನಿಸುತ್ತಿದ್ದಾಗಲೇನಿಧನರಾದರು.

ಕ್ವಾರೆಂಟೈನ್ ಮುದ್ರೆ:ಮಹಾರಾಷ್ಟ್ರ, ಗೋವಾ ದಾಟಿ ಕರ್ನಾಟಕ ಪ್ರವೇಶಿಸಿದಾಗ ಅವರ ಕೈ ಮೇಲೆ ಕ್ವಾರೆಂಟೈನ್ ಮುದ್ರೆ ಒತ್ತಲಾಗಿತ್ತು. ಇದನ್ನು ನೋಡಿದ ಸ್ಥಳೀಯರುಅವರ ಹತ್ತಿರ ಹೋಗಲು ಹಿಂಜರಿದರು. ಅವರ ಕುಟುಂಬದವರು ಎಷ್ಟೇ ಮನವಿ ಮಾಡಿದರೂ ಪ್ರಯೋಜನ‌ವಾಗಲಿಲ್ಲ. ಸುಮಾರು ಎರಡು ಗಂಟೆಮೃತದೇಹವುರಸ್ತೆಯ ಮೇಲೆಯೇ ಇತ್ತು. ನಂತರ ಸಾಮಾಜಿಕ ಕಾರ್ಯಕರ್ತ ರಾಮು ಕೆಂಚನ್ ಸ್ಥಳಕ್ಕೆ ಬಂದು ಪೊಲೀಸ್ ಅಧಿಕಾರಿಗಳ ಸಹಾಯದಿಂದಆಂಬುಲೆನ್ಸ್ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.