ADVERTISEMENT

ಹಿರಿಯ ಸಾಹಿತಿ ನಾ.ಸು. ಭರತನಹಳ್ಳಿ ನಿಧನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 17:43 IST
Last Updated 25 ಡಿಸೆಂಬರ್ 2020, 17:43 IST
ಹಿರಿಯ ಸಾಹಿತಿ ನಾ.ಸು. ಭರತನಹಳ್ಳಿ
ಹಿರಿಯ ಸಾಹಿತಿ ನಾ.ಸು. ಭರತನಹಳ್ಳಿ   

ಯಲ್ಲಾಪುರ (ಉತ್ತರ ಕನ್ನಡ): ಹಿರಿಯ ಸಾಹಿತಿ ನಾ.ಸು.ಭರತನಹಳ್ಳಿ (84) ಶಿರಸಿಯ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಅವರಿಗೆ ಮೂವರು ಪುತ್ರಿಯರು ಇದ್ದಾರೆ.

ಪತ್ರಕರ್ತರಾಗಿ, ಪತ್ರಿಕೆಯೊಂದರ ಸಂಪಾದಕರಾಗಿ, ಸೃಜನಾತ್ಮಕ ಕಥೆ, ಕಾದಂಬರಿ ಲೇಖಕರಾಗಿ ಸಾಹಿತ್ಯಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರು ಅಂಕಣಕಾರರಾಗಿಯೂ ಪರಿಚಿತರಾಗಿದ್ದರು. 1978ರಿಂದ 1994ರವರೆಗೆ ‘ಡೆಕ್ಕನ್ ಹೆರಾಲ್ಡ್’, ‘ಪ್ರಜಾವಾಣಿ’ ಪತ್ರಿಕೆಗಳ ಯಲ್ಲಾಪುರದ ವರದಿಗಾರರಾಗಿದ್ದರು.

ತಾಲ್ಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯಲ್ಲಾಪುರದಲ್ಲಿ ಜಿಲ್ಲೆಯ ಮೊದಲ ಸಾಹಿತ್ಯ ಭವನದ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿದ್ದರು.

ADVERTISEMENT

ಹಿಂದಿ ಶಿಕ್ಷಕರಾಗಿದ್ದ ಅವರು ಶಿಕ್ಷಣ, ಸಾಹಿತ್ಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಕೊಡುಗೆಗೆ ‘ಕರ್ನಾಟಕ ಶ್ರೀ’ ಪ್ರಶಸ್ತಿ ಪುರಸ್ಕೃತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.