ADVERTISEMENT

ಸಿರಗಾಪುರ: 350 ಜನರಿಗೆ ವಸತಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 9:08 IST
Last Updated 17 ಸೆಪ್ಟೆಂಬರ್ 2020, 9:08 IST
ಕಮಲಾಪುರ ತಾಲ್ಲೂಕಿನ ಸಿರಗಾಪುರ ಸರ್ಕಾರಿ ಶಾಲೆಯಲ್ಲಿ ಮಳೆ ಸಂತ್ರಸ್ತರಿಗೆ ಆರಂಭಿಸಿದ ಪರಿಹಾರ ಕೇಂದ್ರದಲ್ಲಿನ ಮಗುವಿಗೆ ತಹಶೀಲ್ದಾರ್‌ ಅಂಜುಮ್ ತಬಸುಮ್ ಬುಧವಾರ ಮಾಸ್ಕ್ ತೊಡಿಸಿದರು
ಕಮಲಾಪುರ ತಾಲ್ಲೂಕಿನ ಸಿರಗಾಪುರ ಸರ್ಕಾರಿ ಶಾಲೆಯಲ್ಲಿ ಮಳೆ ಸಂತ್ರಸ್ತರಿಗೆ ಆರಂಭಿಸಿದ ಪರಿಹಾರ ಕೇಂದ್ರದಲ್ಲಿನ ಮಗುವಿಗೆ ತಹಶೀಲ್ದಾರ್‌ ಅಂಜುಮ್ ತಬಸುಮ್ ಬುಧವಾರ ಮಾಸ್ಕ್ ತೊಡಿಸಿದರು   

ಕಮಲಾಪುರ: ಬೆಣ್ಣೆತೋರಾ ಹಿನ್ನೀರಿನ ಪ್ರವಾಹದಿಂದಾಗಿ ತಾಲ್ಲೂಕಿನ ಸಿರಗಾಪುರ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು ಸರ್ಕಾರಿ ಶಾಲಾ ಕಟ್ಟಡದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ ಎಂದು ತಹಶೀಲ್ದಾರ್ ಅಂಜುಮ್‌ ತಬಸುಮ್ ತಿಳಿಸಿದರು.

ಈಗಾಗಲೇ ಅವರಿಗೆ ಹಾಸಿಗೆ, ಆಹಾರ ಸಾಮಗ್ರಿ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ. ಕುರಿಕೋಟಾದಲ್ಲಿ ಕೆಲ ಮನೆಗೆ ಳಿಗೆ ನೀರು ನುಗ್ಗಿದೆ. ಅಂಕಲಗಾ ಗ್ರಾಮದಲ್ಲಿ ಹೊಲ ದೊಳಗಿನ ನೀರು ಮನೆಗೆ ನುಗ್ಗಿ ದವಸ ಧಾನ್ಯಗಳು ಹಾಳಾಗಿವೆ. ಹೀಗಾಗಿ ಇವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಪರಿಹಾರ ಕೇಂದ್ರದ ವೀಖ್ಷಣೆಗೆ ಕಂದಾಯ ನಿರೀಕ್ಷಕ ವೆಂಕಟೇಶ ಅಡೋಣಿ, ಗ್ರಾಮ ಲೆಕ್ಕಾಧಿಕಾರಿಗಳಾದ ಪದ್ಮಾವತಿ, ಲೆಕ್ಕಾಧಿಕಾರಿ ಬಸವರಾಜ ಕಟ್ಟಳ್ಳಿ, ಮುಡಬಿ ಗ್ರಾಮ ಲೆಕ್ಕಾಧಿಕಾರಿ ಸಂಜುಕುಮಾರ ಹಾಗೂ ಪಿಡಿಒ ಅರವಿಂದ ಚೌವಾಣ್ ಅವರನ್ನು ನೇಮಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT