ADVERTISEMENT

ವಿಧಾನಸೌಧ | ಒಬ್ಬರೇ ಬರ್ತೀದ್ದೀರಲ್ಲ ಸಾರ್: ಶಿವಮೊಗ್ಗ ಶಾಸಕರಿಗೆ ಪೊಲೀಸರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 22:30 IST
Last Updated 19 ಜುಲೈ 2023, 22:30 IST
ಶಾಸಕ ಎಸ್.ಎನ್.ಚನ್ನಬಸಪ್ಪ
ಶಾಸಕ ಎಸ್.ಎನ್.ಚನ್ನಬಸಪ್ಪ   

ಬೆಂಗಳೂರು: ಕಲಾಪದಲ್ಲಿ ಭಾಗವಹಿಸಲು ಬುಧವಾರ ವಿಧಾನಸೌಧಕ್ಕೆ ಬಂದ ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರನ್ನು ಪೊಲೀಸರು ವಿಧಾನಸಭೆಯ ಪ್ರವೇಶ ದ್ವಾರದಲ್ಲೇ ತಡೆದರು.

‘ನಾನು ಶಿವಮೊಗ್ಗ ಕ್ಷೇತ್ರದ ಎಂಎಲ್‌ಎ’ ಎಂದು ಚನ್ನಬಸಪ್ಪ ನಗುತ್ತಲೇ ಪರಿಚಯಿಸಿಕೊಂಡರು.

‘ಹೌದಾ ಸಾರ್. ಜತೆಗೆ ಯಾರೂ ಇಲ್ಲವಲ್ಲ. ಒಬ್ಬರೇ ಬರ್ತೀದ್ದೀರಲ್ಲ ಹಾಗಾಗಿ, ಯಾರೋ ಎಂದು ಕೊಂಡೆವು’ ಎಂದು ಮಹಿಳಾ ಕಾನ್‌ಸ್ಟೆಬಲ್‌ ಕ್ಷಮೆ ಕೇಳಿದರು.

ADVERTISEMENT

‘ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೀರಿ. ನನಗೇನು ಬೇಸರವಿಲ್ಲ. ಗುಡ್‌ ಇದೇ ರೀತಿ ಬಿಗಿ ಪರಿಶೀಲನೆ ಮಾಡಿ. ಜನರ ಗುಂಪು ಇದ್ದರೆ ಮಾತ್ರ ಶಾಸಕ ಎನ್ನುವ ಮನೋಭಾವ ಇಟ್ಟುಕೊಳ್ಳಬೇಡಿ’ ಎಂದು ಮುಂದೆ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.