ಮಂಗಳೂರು: ಇಲ್ಲಿ ಗುರುವಾರ ನಡೆದ ಗಲಭೆಯ ಹೊಣೆಯನ್ನು ಕಾಂಗ್ರೆಸ್ ಹೊರಬೇಕು. ಯುಟಿ ಖಾದರ್ ಹೇಳಿಕೆ ನೀಡಿ 24 ಗಂಟೆಯೊಳಗೆ ಈ ಗಲಾಟೆಯಾಗಿದೆ,ಈ ಕುರಿತು ತನಿಖೆಯಾಗಬೇಕು ಎಂದು ಸಂಸದೆಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇರಳದಿಂದ ಬಂದು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಬಾಯಿಗೆ ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸುವುದನ್ನು ಕಾಶ್ಮೀರದಲ್ಲಿ ನೋಡುತ್ತಿದ್ದೆವು. ಆದರೆ, ಈಗ ಇಲ್ಲಿ ನೋಡುತ್ತಿದ್ದೇವೆ ಎಂದರು.
ಇದಕ್ಕೆಲ್ಲಾ ಕುಮ್ಮುಕ್ಕು ನೀಡುತ್ತಿರುವ ಪಿಎಫ್‌ಐ ಮೇಲೆ ನಿಷೇಧ ಹೇರಬೇಕು. ಈ ಸಂಬಂಧ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.