ADVERTISEMENT

ಧಾರವಾಡದ ಟ್ರಸ್ಟ್ ಆಸ್ತಿಯನ್ನು ಹೊರಟ್ಟಿ ಕಬಳಿಸಿದ್ದಾರೆ: ವಾಲ್ಮೀಕಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 9:59 IST
Last Updated 29 ಅಕ್ಟೋಬರ್ 2018, 9:59 IST
ವಾಲ್ಮೀಕಿ ಮಹಾಸಂಸ್ಥಾನಪೀಠ (ರಾಜನಹಳ್ಳಿ)  ಪೀಠಾಧ್ಯಕ್ಷರಾದ ವಾಲ್ಮೀಕಿ ಪ್ರಸನ್ನಾನಂದ  ಸ್ವಾಮೀಜಿ
ವಾಲ್ಮೀಕಿ ಮಹಾಸಂಸ್ಥಾನಪೀಠ (ರಾಜನಹಳ್ಳಿ)  ಪೀಠಾಧ್ಯಕ್ಷರಾದ ವಾಲ್ಮೀಕಿ ಪ್ರಸನ್ನಾನಂದ  ಸ್ವಾಮೀಜಿ   

ತುಮಕೂರು: 'ನಮ್ಮ ಮಠಕ್ಕೆ ಸೇರಿದ ಧಾರವಾಡದ ಸರ್ವೋದಯ ಶಿಕ್ಷಣ ಟ್ರಸ್ಟ್ ಆಸ್ತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಬಳಿಸಿದ್ದು, ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ ಎಂದು ವಾಲ್ಮೀಕಿ ಮಹಾಸಂಸ್ಥಾನಪೀಠ (ರಾಜನಹಳ್ಳಿ) ಪೀಠಾಧ್ಯಕ್ಷರಾದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ' ಸರ್ವೋದಯ ಶಿಕ್ಷಣ ಟ್ರಸ್ಟ್ ಗೆ ಸಂಬಂಧಿಸಿದವಪ್ರಕರಣ ಕೋರ್ಟ್‌ನಲ್ಲಿದೆ.

ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳುತ್ತೇನೆ ಎಂದು ಈಚೆಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಅದರೆ, ಅರ್ಜಿದಾರರಾಗಿ ಯಾವ ಕೋರ್ಟ್ ನಲ್ಲೂ ಪ್ರಕರಣ ದಾಖಲಿಸಿಲ್ಲ. ಟ್ರಸ್ಟಿನ ಆಡಳಿತ ತಾವೇ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಟ್ರಸ್ಟ್ ಅವರದ್ದೇ ಎಂಬುದಕ್ಕೆ ದಾಖಲೆ ಇಲ್ಲ. ಅವರೇ ಅಧ್ಯಕ್ಷರೆಂದು ಕೋರ್ಟ್ ಆದೇಶ ನೀಡಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ADVERTISEMENT

ಮಾಧ್ತಮಗಳೇ ವೇದಿಕೆ ಸೃಷ್ಟಿಸಿದರೆ ಈ ಕುರಿತು ಚರ್ಚಿಸಲು ದಾಖಲಾತಿಗಳೊಂದಿಗೆ ಸಿದ್ಧ. ಹೊರಟ್ಟಿ ಅವರೂ ದಾಖಲೆಗಳಿದ್ದರೆ ತೆಗೆದುಕೊಂಡು ಬಂದು ಚರ್ಚೆ ಮಾಡಲಿ ಎಂದು ತಿಳಿಸಿದರು.

ಬಸವರಾಜ ಹೊರಟ್ಟಿ ಅವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕವಾಗಿ ತಪ್ಪು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅರೋಪಿಸಿದರು.

ಜಾತ್ಯತೀತ ಜನತಾ ದಳಕ್ಕೂ ಮತ್ತು ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ವಾಮೀಪಿ ಸ್ಪಷ್ಟಪಡಿಸಿದರು.

ಹೊರಟ್ಟಿ ಅವರು ಈ ರೀತಿ ಅಕ್ರಮ ಹಾಗೂ ಅವ್ಯವಹಾರ ಮಾಡಿರುವುದರಿಂದ ವಿಧಾನ ಪರಿಷತ್ ಅಧ್ಯಕ್ಷ ಸ್ಥಾನದಲ್ಲಿರಬಾರದು ಎಂದರು.

ಆ ಸ್ಥಾನದ ಗೌರವ ಉಳಿಯಬೇಕಾದರೆ ಕೆಳಗಿಳಿಸಬೇಕು. ಇಲ್ಲದೇ ಇದ್ದರೆ ವಾಲ್ಮೀಕಿ ಸಮುದಾಯದೊಂದಿಗೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.