ADVERTISEMENT

ಎಸ್‌ಐ ಹುದ್ದೆ ಪಡೆದ 60 ಎಂಜಿನಿಯರ್‌ಗಳು!

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 14:34 IST
Last Updated 17 ಜನವರಿ 2019, 14:34 IST

ಮೈಸೂರು: ಇಲ್ಲಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯ ಕವಾಯತು ಮೈದಾನದಲ್ಲಿ ಸೋಮವಾರ ನಡೆದ 41ನೇ ತಂಡದ ಸಬ್‌ಇನ್‌ಸ್ಪೆಕ್ಟರ್‌ಗಳ ನಿರ್ಗಮನ ಪಥಸಂಚಲನದಲ್ಲಿ 50 ಮಹಿಳೆಯರೂ ಒಳಗೊಂಡಂತೆ 287 ಮಂದಿ ಭಾಗಿಯಾದರು.

ಬಿಇ ಹಾಗೂ ಎಂಟೆಕ್ ಪದವಿ ಪಡೆದ 60 ಮಂದಿ ಇದ್ದುದು ವಿಶೇಷ. ಈ ಹುದ್ದೆಯ ಕನಿಷ್ಠ ವಿದ್ಯಾರ್ಹತೆ ಪದವಿ. ಆದರೆ ಸ್ನಾತಕೋತ್ತರ ಪದವಿ ಪಡೆದ 41 ಪ್ರಶಿಕ್ಷಣಾರ್ಥಿಗಳು ಇದ್ದರು. ಎಂಟೆಕ್‌ (3), ಎಂಎಸ್ಸಿ (9), ಎಂಎ (18), ಎಂಬಿಎ (2), ಎಂಕಾಂ (6) ಮತ್ತು ಎಂಎಸ್‌ಡಬ್ಲ್ಯು (3) ವ್ಯಾಸಂಗ ಮಾಡಿದವರು ತಂಡದಲ್ಲಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳು ಇಲ್ಲಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ 11 ತಿಂಗಳ ಕಠಿಣ ತರಬೇತಿ ಪೂರೈಸಿದರು. ಒಂದೇ ತಂಡದಲ್ಲಿ ಇಷ್ಟೊಂದು ಮಂದಿ ನಿರ್ಗಮನಪಥಸಂಚಲನದಲ್ಲಿ ಪಾಲ್ಗೊಂಡದ್ದು ಅಕಾಡೆಮಿಯ ಇತಿಹಾಸದಲ್ಲಿ ಇದೇ ಮೊದಲು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.