ADVERTISEMENT

ನಾಲ್ವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಲು ಸ್ವೀಕರ್‌ಗೆ ಮನವಿ: ಸಿದ್ದರಾಮಯ್ಯ

ಪಕ್ಷಾಂತರ ನಿಷೇಧ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 7:03 IST
Last Updated 8 ಫೆಬ್ರುವರಿ 2019, 7:03 IST
   

ಬೆಂಗಳೂರು:ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರಿಗೆ ವಿಪ್‌ ಜಾರಿಗೊಳಿಸಿದ್ದು,ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಶುಕ್ರವಾರ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. ನಾಲ್ವರು ಅತೃಪ್ತ ಶಾಸಕ ವಿರುದ್ದ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಜರಿಗಿಸುವಂತೆ ಸ್ಪೀಕರ್‌ಗೆ ದೂರು ನೀಡಲುಸಿದ್ದರಾಮಯ್ಯ ಮುಂದಾಗಿದ್ದಾರೆ.

ಬಿ.ಸಿ.ಪಾಟೀಲ ಮಧ್ಯಾಹ್ನ ಬರುವುದಾಗಿ ಹೇಳಿದ್ದಾರೆ. ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಉಮೇಶ ಜಾಧವ, ಬಿ.ನಾಗೇಂದ್ರ ಬಂದಿಲ್ಲ. ಕಂಪ್ಲಿ ಶಾಸಕ ಜೆ.ಎನ್. ಗಣೇಶ ಅವರ ಜತೆ ಇಲ್ಲ. ನಾಲ್ವರು ಅತೃಪ್ತರು ಹಾಜರಾಗಲು ಸಾಧ್ಯವಾಗದಿರಲು ಕಾರಣ ನೀಡಿ ಪತ್ರ ಬರೆದಿದ್ದಾರೆ. ಫೆ.15ರವರೆಗೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಅವರಿಗೆ ಈಗಾಲೇ ಸಾಕಷ್ಟು ಅವಕಾಶ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಎಲ್ಲ ಶಾಸಕರಿಗೂ ಸದನದಲ್ಲಿ ಪಾಲ್ಗೊಳ್ಳುವಂತೆ ವ್ಹಿಪ್ ಜಾರಿ ಮಾಡಲಾಗಿತ್ತು. ಅಧಿವೇಶನ ಮುಗಿಯುವರೆಗೂ ಬರುವುದಿಲ್ಲ ಎಂದು ನಾಲ್ವರು ಪತ್ರದಲ್ಲಿ ತಿಳಿಸಿದ್ದಾರೆ. ನಾಲ್ವರು ಅತೃಪ್ತರ ವಿರುದ್ದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಜರುಗಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇವೆ. ಇದು ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿರೋಧವಾಗಿ ಕೈಗೊಂಡ ನಿರ್ಣಯ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಸಂಜೆಯೊಳಗೆ ಸಭಾಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ADVERTISEMENT

'ಜೆ.ಎನ್.ಗಣೇಶ ಪಾಪ ಸಿಕ್ಕಾಕಿಕೊಂಡು ಬರಲಿಕ್ಕೆ ಆಗ್ತಿಲ್ಲಾ. ಯಾರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಸಹಜನ್ಯಾಯ ನೋಡಬೇಕು. ಆ ಪ್ರಕಾರ ಅವಕಾಶ ಕೊಡಬೇಕು. ಹೀಗಾಗಿ ಅವರಿಗೆ ಅವಕಾಶ ನೀಡಲಾಗಿದೆ‌' ಎಂದು ಹೇಳಿದರು.

ಶಾಸಕರಿಗೆ ಆಮಿಷ ಒಡ್ಡಿದೆ ಎನ್ನಲಾದ ಆಡಿಯೊ ಫೇಕ್ ಎನ್ನುವುದು ಯಡಿಯೂರಪ್ಪ ಹೇಳಿದ್ದೊ ಅಥವಾ ಮಿಮಿಕ್ರಿಯೊ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಹಿಂದೆ ಕೂಡ ಅನಂತಕುಮಾರ್ ಆಡಿಯೊ ಬಯಲಾಗಿತ್ತು. ತನಿಖೆಯಿಂದ ಸಾಬೀತಾಗಿತ್ತು. ನಾವೇ ಕ್ರಮ ಕೈಗೊಂಡಿರಲಿಲ್ಲ. ಯಡಿಯೂರಪ್ಪ ಬಣ್ಣ ಸಂಪೂರ್ಣ ಬಯಲಾಗಿದೆ ಎಂದರು.

(ಆಪರೇಷನಲ್‌ ಕಮಲಕ್ಕೆ ಸಾಕ್ಷಿಯಾಗಿ ಬಿಡುಗಡೆಯಾಗಿರುವ ಆಡಿಯೊ ಕ್ಲಿಪ್‌; ’ಆಡಿಯೊ ಕೇಳಿ–ನಿಮ್ಮ ಪಕ್ಷದ ನಿಯತ್ತು ಅನಾವರಣಗೊಂಡಿದೆ’ ಎಂದು ಪ್ರಧಾನಿ ಮೋದಿ ಅವರನ್ನು ಟ್ಯಾಗ್‌ ಮಾಡಿ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.