ADVERTISEMENT

ಸಿದ್ದರಾಮಯ್ಯ ಸಾಕ್ಷಿ ನಾಶ ಪ್ರವೀಣ: ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 18:00 IST
Last Updated 15 ಜುಲೈ 2022, 18:00 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ‘ಸಾಕ್ಷಿ ನಾಶ ಪ್ರವೀಣರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧ ದಾಖಲಾಗಿದ್ದ 50 ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸುವ ಬದಲು ಲೋಕಾಯುಕ್ತಕ್ಕೇ ಬೀಗ ಜಡಿದು, ಇಂದು ಗಾಳಿಯಲ್ಲಿ ಗುಂಡು ಹೊಡೆಯುತ್ತಿರುವುದೇಕೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಅವರು, ‘ನಿಮ್ಮ ಮೇಲೆ ಅಷ್ಟೊಂದು ಕಳಂಕವಿದ್ದರೂ ಹುಳ್ಳುಳ್ಳಗೆ ಮಾತನಾಡಲು ಆತ್ಮಸಾಕ್ಷಿ ಹೇಗೆ ಒಪ್ಪುತ್ತದೆ’ ಎಂದು ಕಿಡಿಕಾರಿದ್ದರೆ.

‘ನಿಮ್ಮ ಬಳಿ ಮುಚ್ಚಿಡಲು ಏನೂ ಇಲ್ಲದಿದ್ದೇ ರೊಚ್ಚಿಗೇಳುವುದು ಏಕೆ ಸಿದ್ದರಾಮಯ್ಯ ಅವರೆ? ತಪ್ಪಿತಸ್ಥ ಮನಃಸಾಕ್ಷಿಗೆ ಆರೋಪದ ಅಗತ್ಯವಿದೆಯೇ? ನಮ್ಮ ಸರ್ಕಾರ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹನೆ ಹೊಂದಿದೆ. ಜನರ ಹಣವನ್ನು ಕಳ್ಳತನ ಮಾಡುವುದನ್ನೂ ಸಹಿಸುವುದಿಲ್ಲ. ಪ್ರತಿಯೊಬ್ಬ ಅಪರಾಧಿಗೂ ತಕ್ಕ ಶಾಸ್ತಿ ಆಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಬಿಜೆಪಿ ಸರ್ಕಾರದ ಪ್ರತಿಯೊಬ್ಬರ ವಿರುದ್ಧ ಆರೋಪ ಮಾಡುವುದು ಸಿದ್ದರಾಮಯ್ಯ ಅವರಿಗೆ ಹವ್ಯಾಸವಾಗಿದೆ. ನಿಮ್ಮ ಮುಖಕ್ಕೆ ನೀವೇ ಕನ್ನಡಿ ಹಿಡಿದು ಆತ್ಮಸಾಕ್ಷಿಯನ್ನು ಪ್ರಶ್ನಿಸಿ. ನಿಮ್ಮ ಸರ್ಕಾರದಲ್ಲಿ ನಡೆದ ಹಗರಣಗಳು ಮತ್ತು ನೀವು ಪ್ರತಿಪಾದಿಸಿದ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಎಲ್ಲರಿಗೂ ಗೊತ್ತಿದೆ’ ಎಂದು ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.