ಮೈಸೂರು: ‘ಪಕ್ಷ ದ್ರೋಹಿಗಳು ಯಾವುದೇ ಸರ್ಕಾರದಲ್ಲಿ ಮಂತ್ರಿಯಾದರೂ ಅನರ್ಹರೇ. ಅವರು ಗೆದ್ದು ಬಂದಿರಬಹುದು, ಆದರೆ, ಪಕ್ಷಾಂತರ ಮಾಡಿದ ಕಳಂಕ ಸದಾ ಇರುತ್ತದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಟೀಕಿಸಿದರು.
‘ಯಡಿಯೂರಪ್ಪ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ. ಅವರಿಗೆ ಪಕ್ಷದ ಹೈಕಮಾಂಡ್ ಯಾವುದೇ ಸ್ವಾತಂತ್ರ್ಯ ನೀಡುತ್ತಿಲ್ಲ’ ಎಂದರು.
‘10 ಮಂದಿ ಮಂತ್ರಿ ಆಗಿರುವುದು ನನಗಂತೂ ಖುಷಿ ನೀಡಿಲ್ಲ. ಆದರೂ, ಶುಭಾಶಯ ಕೋರುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲಿ’ ಎಂದು ಆಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.