ADVERTISEMENT

‘ನೋಟು ರದ್ಧತಿಯಿಂದ ಉಗ್ರವಾದ ಕಡಿಮೆಯಾಗುತ್ತೆ ಎಂದಿದ್ದರು ಮೋದಿ, ಈಗ ಆಗಿದ್ದೇನು?’

ಪುಲ್ವಾಮ ದಾಳಿಗೆ ಗುಪ್ತಚರ ವೈಫಲ್ಯವೇ ಕಾರಣ: ಮಾಜಿ ಸಿಎಂ ಆರೋಪ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 9:03 IST
Last Updated 16 ಫೆಬ್ರುವರಿ 2019, 9:03 IST
   

ಮೈಸೂರು: ‘ನೋಟು ರದ್ಧತಿಯಿಂದಾಗಿ ಕಪ್ಪು ಹಣ ಚಲಾವಣೆ ಕಡಿಮೆುಯಾಗುತ್ತದೆ. ಇದರಿಂದ ಉಗ್ರವಾದ ಕಡಿಮೆ ಆಗುತ್ತದೆ ಎಂಬುದಾಗಿ ಪ್ರಧಾನಿ ಹೇಳಿದ್ದರು. ಆದರೆ, ಈಗ ಆಗಿದ್ದೇನು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರದೊಂದಿಗೆ ಶನಿವಾರಮಾತನಾಡಿದ ಅವರು,ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರ ದಾಳಿಗೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

‘ಅಮಾನುಷ, ಹೇಯ ಕೃತ್ಯವನ್ನು ಖಂಡಿಸುತ್ತೇನೆ. ಇಂತಹ ಘಟನೆಗೆ ಕಾರಣವಾದ ಉಗ್ರವಾದಿಗಳ ಬಗ್ಗೆ ಸರ್ಕಾರ ಯಾವುದೇ ಕಾರಣಕ್ಕೂ ಮೃದು ಧೋರಣೆ ತಾಳಬಾರದು. ಉಗ್ರರು ಅಡಗಿರುವ ತಾಣಗಳ ಮೇಲೆ ದಾಳಿ ಮಾಡಿ ಅವರನ್ನು ನಾಶ ಮಾಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.