ADVERTISEMENT

ಸಿರಿಧಾನ್ಯ | ಎಂಎಸ್‌ಪಿಯಲ್ಲಿ ಖರೀದಿ; ಕೇಂದ್ರಕ್ಕೆ ಮನವಿ: ಚಲುವರಾಯಸ್ವಾಮಿ

ಸಿರಿಧಾನ್ಯ–ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪದಲ್ಲಿ ಸಚಿವ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 15:50 IST
Last Updated 25 ಜನವರಿ 2025, 15:50 IST
<div class="paragraphs"><p>ಧಾರವಾಡ ಕೃಷಿ ವಿದ್ಯಾಲಯದ ಪ್ರಾಧ್ಯಾಪಕಿ ಸಣ್ಣಪಾಪಮ್ಮ ಕೆ.ಜೆ. ಬರೆದ ‘ಬಾಳೆದಿಂಡಿನ ಮೌಲ್ಯವರ್ಧಿತ ಉತ್ಪನ್ನಗಳ ಮಾಹಿತಿ’ ಪುಸ್ತಕವನ್ನು ಸಾವಯವ ಮತ್ತು ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬಿಡುಗಡೆ ಮಾಡಿದರು.&nbsp;&nbsp;</p></div>

ಧಾರವಾಡ ಕೃಷಿ ವಿದ್ಯಾಲಯದ ಪ್ರಾಧ್ಯಾಪಕಿ ಸಣ್ಣಪಾಪಮ್ಮ ಕೆ.ಜೆ. ಬರೆದ ‘ಬಾಳೆದಿಂಡಿನ ಮೌಲ್ಯವರ್ಧಿತ ಉತ್ಪನ್ನಗಳ ಮಾಹಿತಿ’ ಪುಸ್ತಕವನ್ನು ಸಾವಯವ ಮತ್ತು ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬಿಡುಗಡೆ ಮಾಡಿದರು.  

   

ಬೆಂಗಳೂರು: ‘ಎಲ್ಲ ರೀತಿಯ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

ಸಾವಯವ ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪದಲ್ಲಿ ಶನಿವಾರ ಅವರು ಮಾತನಾಡಿದರು.

ADVERTISEMENT

ಕೃಷಿ ಇಲಾಖೆಯಲ್ಲಿ ಕೃಷಿ ನವೋದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ, ನೆರವು ನೀಡಲಾಗುತ್ತಿದೆ. ಕೆಪೆಕ್‌ನಿಂದ ಕೃಷಿ ಉತ್ಪನ್ನಗಳ ರಪ್ತು ಉತ್ತೇಜನಕ್ಕೆ ಕ್ರಮ ವಹಿಸಲಾಗುತ್ತಿದೆ. ಮುಂದಿನ ಯುಗ ಕೃಷಿಕರ ಅಭ್ಯುದಯ ಯುಗವಾಗಬೇಕು. ಇಂಥ ಅವಕಾಶಗಳನ್ನು ಯುವ ಉದ್ಯಮಿಗಳು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

‘ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ, ಮಾರಾಟ, ರಪ್ತು ಉದ್ಯಮದಲ್ಲಿ ಹೆಚ್ಚು ಯುವಕರು ತೊಡಗಿಸಿಕೊಂಡಿರುವುದು ಆಶಾದಾಯಕ ಬೆಳವಣಿಗೆ. ಇದು ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಇರುವ ಉಜ್ವಲ ಭವಿಷ್ಯವನ್ನು ಸೂಚಿಸುತ್ತಿದೆ’ ಎಂದು ಶ್ಲಾಘಿಸಿದರು.

ಶಾಸಕ ಅಶ್ವತ್ಥನಾರಾಯಣ ಮಾತನಾಡಿ, ‘ಕೃಷಿ ಇರಲಿ, ಆರೋಗ್ಯ ಇರಲಿ ಎರಡೂ ಸುಸ್ಥಿರವಾಗಿರಬೇಕು. ಸಿರಿಧಾನ್ಯ ಎರಡಕ್ಕೂ ಪೂರಕವಾಗಿದೆ. ಸಿರಿಧಾನ್ಯ ಬೆಳೆದು ಜೀವನ ಕಟ್ಟಿಕೊಳ್ಳುವಷ್ಟು ಪ್ರೋತ್ಸಾಹ ರೈತರಿಗೆ ಸಿಗಬೇಕು. ಅದಕ್ಕೆ ಬೇಕಾದ ಬೆಂಬಲ ಬೆಲೆ, ಮಾರುಕಟ್ಟೆ ಸಿಗಬೇಕು’ ಎಂದು ಆಶಿಸಿದರು.

‘ನಮ್ಮಲ್ಲಿ ಅಕ್ಕಿಯನ್ನು ಅತಿಹೆಚ್ಚು ಬಳಕೆ ಮಾಡಲಾಗುತ್ತಿದೆ. ಅಕ್ಕಿ ಆರೋಗ್ಯಕ್ಕೆ ಒಳ್ಳೆಯದಲ್ಲ. ರಾಗಿ, ಜೋಳ ಒಳ್ಳೆಯದು ಎಂಬುದನ್ನು ಜನರಿಗೆ ತಿಳಿ ಹೇಳಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

'ಗ್ರಾಮೀಣ ಪಾಕ ಪರಂಪರೆ’, ‘ಉತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳ ಅಡುಗೆಗಳು ಮತ್ತು ಸಿರಿಧಾನ್ಯ ಖಾದ್ಯಗಳು’, ‘ಬಾಳೆದಿಂಡಿನ ಮೌಲ್ಯವರ್ಧಿತ ಉತ್ಪನ್ನಗಳ ಮಾಹಿತಿ’ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ವಿವಿಧ ಜಿಲ್ಲೆಗಳ ಪ್ರಗತಿಪರ ಕೃಷಿಕರನ್ನು, ಉತ್ತಮ ಮಳಿಗೆಯ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು.

₹ 185 ಕೋಟಿ ಒಪ್ಪಂದ

ಮೂರುದಿನಗಳ ಮೇಳದಲ್ಲಿ 185 ಬಿ2ಬಿ ಸಭೆಗಳಲ್ಲಿ 194 ಉತ್ಪಾದಕರು 105 ಮಾರಾಟ ಸಂಸ್ಥೆಗಳು ಪಾಲ್ಗೊಂಡಿದ್ದವು. ಉತ್ಪಾದನೆಗಳಿಗೆ ಸಂಬಂಧಿಸಿದಂತೆ ₹185.41 ಕೋಟಿ ಒಪ್ಪಂದ ನಡೆದಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು. ಮೂರು ದಿನಗಳಲ್ಲಿ 3 ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದಾರೆ. ದೇಶದ 25 ರಾಜ್ಯಗಳಿಂದ ಆಸಕ್ತರು ಭಾಗವಹಿಸಿದ್ದಾರೆ. 10 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ವಿವಿಧ ರಾಜ್ಯಗಳ ಐವರು ಕೃಷಿ ಸಚಿವರು ಭಾಗವಹಿಸಿರುವುದು ದಾಖಲೆ. ಮಳಿಗೆಗಳಲ್ಲಿ ನಿರೀಕ್ಷೆಗೂ ಮೀರಿ ವ್ಯಾಪಾರ ವಹಿವಾಟುಗಳು ನಡೆದಿವೆ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.