ADVERTISEMENT

ಗಿನ್ನೆಸ್‌ ದಾಖಲೆಗೆ ರೇಖಾಚಿತ್ರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 20:31 IST
Last Updated 22 ಜೂನ್ 2022, 20:31 IST
ರೇಖಾಚಿತ್ರದ ದೃಶ್ಯ
ರೇಖಾಚಿತ್ರದ ದೃಶ್ಯ   

ಬೆಂಗಳೂರು: ದಿ ಆಕ್ಸ್‌ಫರ್ಡ್‌ ವಿಜ್ಞಾನ ಕಾಲೇಜಿನ ಫ್ಯಾಷನ್‌ ಮತ್ತು ಉಡುಪು ವಿನ್ಯಾಸ ವಿಭಾಗದ ಹರ್ಷ ನೇತೃತ್ವದ 9 ಮಂದಿಯ ‘ಹ್ಯಾಪಿ ಆರ್ಟ್‌’ ತಂಡವು ಭಾರತ ಸಾಂಸ್ಕೃತಿಕ ಪರಂಪರೆ ಹಾಗೂ ಸ್ಮಾರಕ ಪ್ರತಿಬಿಂಬಿಸುವ ದೊಡ್ಡ ರೇಖಾಚಿತ್ರ ಅನಾವರಣಗೊಳಿಸಿದೆ.

ಗಿನ್ನೆಸ್‌ ದಾಖಲೆಗಾಗಿ 690 ಚದರ ಮೀಟರ್‌ ರೇಖಾಚಿತ್ರ ವಿನ್ಯಾಸಗೊಳಿಸಲಾಗಿದೆ. ಈ ಹಿಂದೆ ಹರಿಯಾಣದ ರಣದೀಪ್‌ ಸಿಂಗ್‌ ನೇತೃತ್ವದ 8 ಸದಸ್ಯರ ತಂಡವು ರೂಪಿಸಿದ್ದ 673.45 ಚದರ ಮೀಟರ್‌ ರೇಖಾಚಿತ್ರವು ಗಿನ್ನಿಸ್‌ ದಾಖಲೆಗೆ ಸೇರಿತ್ತು.

ಈ ರೇಖಾಚಿತ್ರದಲ್ಲಿ 30 ಸ್ಮಾರಕ, 2 ಗಾರ್ಡ್‌ಗಳು, ವಿವಿಧ ರಾಜ್ಯಗಳಿಗೆ ಸೇರಿದ 6 ಚಿಹ್ನೆಗಳನ್ನು ಒಳಗೊಂಡಂತಹ ದೇಶದ ಸಾಂಸ್ಕೃತಿಕ ವೈವಿಧ್ಯ ಬಿಂಬಿಸಲಾಗಿದೆ. ಕಲಾಕೃತಿ ರಚಿಸಲು ಮಾರ್ಚ್‌ 22ರಿಂದ ಜೂನ್‌ 14ರ ವರೆಗೆ ಒಟ್ಟು 85 ದಿನಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.

ADVERTISEMENT

ವಿದ್ಯಾಸಂಸ್ಥೆಯ ನಿರ್ದೇಶಕ ಡಾ.ಕೆ.ಎಂ.ರವಿಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆಯನ್ನು ಹೊರತರಲಿಕ್ಕೆ ಇಂತಹ ವೇದಿಕೆಗಳು ಸಾಕ್ಷಿ. ಗಿನ್ನೆಸ್‌ ದಾಖಲೆಯತ್ತ ಮುಖ ಮಾಡಿರುವ ತಂಡದ ಪ್ರಯತ್ನ, ಶ್ರಮ, ಉತ್ಸಾಹವು ಶ್ಲಾಘನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.