ADVERTISEMENT

Photos | ರಾಜ್ಯದ ಧೀಮಂತ ರಾಜಕಾರಣಿ ಎಸ್.​ಎಂ. ಕೃಷ್ಣ ಚಿತ್ರ ನೋಟ ಇಲ್ಲಿದೆ..

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 4:26 IST
Last Updated 10 ಡಿಸೆಂಬರ್ 2024, 4:26 IST
<div class="paragraphs"><p>ಎಸ್.ಎಂ.ಕೃಷ್ಣ(ಸೋಮನಹಳ್ಳಿ‌ ಮಲ್ಲಯ್ಯ ಕೃಷ್ಣ)</p></div>

ಎಸ್.ಎಂ.ಕೃಷ್ಣ(ಸೋಮನಹಳ್ಳಿ‌ ಮಲ್ಲಯ್ಯ ಕೃಷ್ಣ)

   

ಎಸ್.ಎಂ.ಕೃಷ್ಣ– 1932 ಮೇ.1ರಂದು ಮಲ್ಲಯ್ಯ ಮತ್ತು ತಾಯಮ್ಮ ದಂಪತಿಯ ಮಗನಾಗಿ ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿ ಜನನ.

ಸೋಮನಹಳ್ಳಿ ಪ್ರಾಥಮಿಕ ಶಿಕ್ಷಣ, ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರೌಢಶಿಕ್ಷಣ, ಯುವರಾಜ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಹಾಗೂ ಮಹಾರಾಜ ಕಾಲೇಜಿನಲ್ಲಿ ಕಾನೂನು ಪದವಿ ಶಿಕ್ಷಣ, ಅಮೆರಿಕಾದ ಡಲ್ಲಾಸ್‌ನ ಸೌಥರ್ನ್ ಮೆತಡಿಸ್ಟ್ ಹಾಗೂ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. 

ADVERTISEMENT

1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಚುನಾವಣಾ ರಾಜಕೀಯ ಆರಂಭ, ಮೊದಲ ಚುನಾವಣೆಯಲ್ಲಿ ಗೆಲುವು

1967 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು

1968ರ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು

1971ರಲ್ಲಿ ಎಂಪಿಯಾಗಿ ಮರು ಆಯ್ಕೆ. ಈ ವೇಳೆ ಡಿ.ದೇವರಾಜ ಅರಸು ಕೃಷ್ಣ ಅವರನ್ನು ಎಂಎಲ್ಸಿ ಮಾಡಿಕೊಂಡು ಸಚಿವರನ್ನಾಗಿ ಮಾಡುತ್ತಾರೆ. ಇದರಿಂದಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ

1980ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗುತ್ತಾರೆ. ಮೂರನೇ ಬಾರಿಗೆ ಎಂಪಿಯಾದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರಾಗುತ್ತಾರೆ

1984ರ ಎಂಪಿ ಚುನಾವಣೆಯಲ್ಲಿ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ವಿರುದ್ಧ ಸೋಲು

ಡಾ.ರಾಜ್‌ಕುಮಾರ್‌ ಹಾಗೂ ಎಸ್‌.ಎಂ ಕೃಷ್ಣ

ಅಂಬರೀಶ್‌ ಹಾಗೂ ಎಸ್‌.ಎಂ ಕೃಷ್ಣ

1989ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಡಿಸಿಎಂ ಹಾಗೂ ಸ್ಪೀಕರ್ ಹುದ್ದೆ ಅಲಂಕರಿಸುತ್ತಾರೆ

1996ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ, 1999ರಲ್ಲಿ ಗೆದ್ದು ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕಾರ

2004ರ ಚುನಾವಣೆಯಲ್ಲಿ ಬೆಂಗಳೂರು ಚಾಮರಾಜಪೇಟೆಯಿಂದ ಸ್ಪರ್ಧಿಸಿ ಗೆಲುವು

2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ

1999ರಲ್ಲಿ ಗೆದ್ದು ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕಾರ

2010ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡು ಡಾ.ಮನ್‌ಮೋಹನ್ ಸಿಂಗ್ ಸಂಪುಟದಲ್ಲಿ ಕೇಂದ್ರ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಣೆ.

2017ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆ‌. ಕೆಲ ತಿಂಗಳಲ್ಲಿ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.