ADVERTISEMENT

ಯೋಧ ಮುರಳೀಧರ್‌ ಸಾವು– ಜಿಲ್ಲಾಡಳಿತದಿಂದ ಗೌರವ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 15:04 IST
Last Updated 24 ಜನವರಿ 2023, 15:04 IST
   

ಮಂಗಳೂರು: ಭೋಪಾಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ಯೋಧ ಮುರಳೀಧರ್‌ ಬಿ.ಎಸ್‌.( 37) ಸೋಮವಾರ ಮೃತಪಟ್ಟಿದ್ದಾರೆ. ಅವರ ಪಾರ್ಥೀವ ಶರೀರವನ್ನು ವಿಮಾನದ ಮೂಲಕ ಭೋಪಾಲ್‌ನಿಂದ ಮಂಗಳೂರಿಗೆ ಮಂಗಳವಾರ ತರಲಾಗಿದೆ.

ಮುರಳೀಧರ್‌ ಅವರು ಶಕ್ತಿನಗರದ ಪದವು ಗ್ರಾಮದವರು. ಸಶಸ್ತ್ರ ಸೀಮಾ ಪಡೆಯನ್ನು (ಎಸ್‌ಎಸ್‌ಬಿ) 2007ರಲ್ಲಿ ಸೇರಿದ್ದ ಅವರು ಭೋಪಾಲ್‌ನಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮುರಳೀಧರ್‌ ಅವರ ಪಾರ್ಥೀವ ಶರೀರಕ್ಕೆ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌., ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್‌, ಉಪವಿಭಾಗಾಧಿಕಾರಿ ಮದನ್‌ಮೋಹನ್‌ ಹಾಗೂ ಇತರರು ಬಜಪೆಯ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಸಿದರು.

ADVERTISEMENT

‘ಮುರಳೀಧರ ಅವರ ಪಾರ್ಥೀವ ಶರೀರ ಮಂಗಳವಾರ ನಗರವನ್ನು ತಲುಪಿದ್ದು, ಜಿಲ್ಲಾಡಳಿತದಿಂದ ಅವರಿಗೆ ಗೌರವಗಳನ್ನು ಸಲ್ಲಿಸಿದ್ದೇವೆ. ಪಾರ್ಥೀವ ಶರೀರವನ್ನು ಎ.ಜೆ. ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಇದೇ 25ರಂದು (ಬುಧವಾರ) ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.