ADVERTISEMENT

ಬ್ಯಾಡಗಿಯ ಯೋಧ ಹುತಾತ್ಮ

ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಗಂಭೀರ ಗಾಯಗೊಂಡಿದ್ದ ಯೋಧ

​ಪ್ರಜಾವಾಣಿ ವಾರ್ತೆ
Published 25 ಮೇ 2019, 18:04 IST
Last Updated 25 ಮೇ 2019, 18:04 IST
ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿಯ ಯೋಧ ಶಿವಲಿಂಗೇಶ್ವರ ಪಾಟೀಲ
ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿಯ ಯೋಧ ಶಿವಲಿಂಗೇಶ್ವರ ಪಾಟೀಲ   

ಹಾವೇರಿ: ಭಾರತೀಯ ಸೇನೆಯ 33ನೇ ರಾಷ್ಟ್ರೀಯ ರೈಫಲ್‌ನಲ್ಯಾನ್ಸ್ ನಾಯಕ್, ಆಗಿದ್ದ, ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿಯ ಶಿವಲಿಂಗೇಶ್ವರ ವೀರಭದ್ರಗೌಡ ಪಾಟೀಲ (26) ಶನಿವಾರ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತ ಯೋಧರ ಪಾರ್ಥಿವ ಶರೀರವು ಭಾನುವಾರ ದೆಹಲಿಯಿಂದ ವಿಮಾನದ ಮೂಲಕ ಹೊರಟು, ಗೋವಾ, ಬೆಳಗಾವಿ ಮೂಲಕ ಸ್ವಗ್ರಾಮಕ್ಕೆ ಬರುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದರು.

‘ಜಮ್ಮುಕಾಶ್ಮೀರದಲ್ಲಿ ವಾರದ ಹಿಂದೆ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ ಅವರು ಗುಂಡು ತಗುಲಿ ಗಂಭೀರಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಮಾಹಿತಿ ಬಂದಿತ್ತು ಎಂದು ನಿವೃತ್ತ ಸೈನಿಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಶಿಸನಹಳ್ಳಿ ತಿಳಿಸಿದರು. ಶಿವಲಿಂಗೇಶ್ವರ ಅವರು 2012ರಲ್ಲಿ ಸೇನೆಗೆ ಸೇರಿದ್ದರು.

ಶಿವಲಿಂಗೇಶ್ವರ ಅವರ ತಂದೆ ವೀರಭದ್ರಗೌಡ ಪಾಟೀಲ ನಿವೃತ್ತ ಯೋಧರಾಗಿದ್ದು, ಎರಡು ದಿನಗಳ ಹಿಂದೆ ದೆಹಲಿಗೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT