ADVERTISEMENT

ಕಸಾಪ: ಬೈಲಾ ತಿದ್ದುಪಡಿಗೆ ಹಲವರಿಂದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 20:21 IST
Last Updated 11 ಫೆಬ್ರುವರಿ 2022, 20:21 IST
   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೈಲಾ ತಿದ್ದುಪಡಿಗೆ ಸಾಹಿತಿಗಳು, ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದು, ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನಡೆಯನ್ನು ಖಂಡಿಸಿದ್ದಾರೆ.

ಈ ಬಗ್ಗೆಪುರುಷೋತ್ತಮ ಬಿಳಿಮಲೆ, ಹಿ.ಶಿ.ರಾಮಚಂದ್ರೇಗೌಡ, ಜಿ.ರಾಮ ಕೃಷ್ಣ, ಕೆ. ಮರುಳ ಸಿದ್ದಪ್ಪ, ಎಸ್.ಜಿ.ಸಿದ್ಧರಾಮಯ್ಯ, ಸಬೀಹಾ ಭೂಮಿಗೌಡ, ಎಂ.ಜಿ. ಈಶ್ವರಪ್ಪ, ಬೋಳುವಾರು ಮಹಮದ್ ಕುಂಞ, ಡಿ. ಉಮಾಪತಿ, ಸಿ. ಬಸವಲಿಂಗಯ್ಯ, ರಹಮತ್ ತರೀಕೆರೆ, ಬಿ.ಟಿ. ಲಲಿತಾ ನಾಯಕ್, ದು. ಸರಸ್ವತಿ, ಕೆ. ನೀಲಾ, ಪಿಚ್ಚಳ್ಳಿ ಶ್ರೀನಿವಾಸ್, ಮಾವಳ್ಳಿ ಶಂಕರ್, ಬಾನು ಮುಷ್ತಾಕ್, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಎಚ್.ಟಿ. ಪೋತೆ, ಸುಕನ್ಯಾ, ಕೆ. ಶರೀಫಾ, ಮೀನಾಕ್ಷಿ ಬಾಳಿ, ಎಚ್.ಎಲ್. ಪುಷ್ಪಾ, ಆರ್‌.ಜಿ. ಹಳ್ಳಿ ನಾಗರಾಜ್, ಬಿ. ರಾಜಶೇಖರಮೂರ್ತಿ ಸೇರಿದಂತೆ 34 ಮಂದಿಜಂಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

‘ಬರಗೂರು ರಾಮಚಂದ್ರಪ್ಪ ಅವರು ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ರಚನಾತ್ಮಕ ಕಾರ್ಯಯೋಜನೆ ರೂಪಿಸುವಂತೆ ಸೂಚಿಸಿದ್ದರು. ಅಧ್ಯಕ್ಷರು ನೀಡಿರುವ ಪ್ರತ್ಯುತ್ತರ ಅಹಂಕಾರದಿಂದ ಕೂಡಿದೆ. ಬರಗೂರು ಅವರನ್ನು ಪೂರ್ವಾಗ್ರಹ ಪೀಡಿತರು ಎನ್ನುವ ಮೂಲಕ ಜೋಶಿ ಅವರು ಉದ್ಧಟತನ ತೋರಿರುವುದು ಖಂಡನೀಯ’ ಎಂದಿದ್ದಾರೆ.‘ಬರಗೂರು ಅವರ ಅಭಿಪ್ರಾಯವನ್ನು ಒಪ್ಪದಿರುವ ಸ್ವಾತಂತ್ರ್ಯ ಜೋಶಿ ಅವರಿಗೆ ಇದೆಯಾದರೂ ಭಿನ್ನಾಭಿಪ್ರಾಯವನ್ನು ಸ್ಥಾನ ಗೌರವಕ್ಕೆ ತಕ್ಕಂತೆ ಸೂಕ್ತ ರೀತಿ ಹೇಳಬೇಕು. ’ ಎಂದು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.