ADVERTISEMENT

ವಿಶೇಷ ಭತ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 19:07 IST
Last Updated 11 ಜನವರಿ 2019, 19:07 IST

ಬೆಂಗಳೂರು: ವಿವಿಧ ವೃಂದಗಳಲ್ಲಿ ಕೆಲಸಮಾಡುವ ಸಿಬ್ಬಂದಿಯ ವಿಶೇಷ ಭತ್ಯೆಯನ್ನು ಜ.1ರಿಂದ ಪರಿಷ್ಕರಿಸಲಾಗಿದೆ.

ಆರನೇ ವೇತನ ಆಯೋಗದಶಿಫಾರಸಿನ ಅನುಸಾರ ತಿಂಗಳಿಗೆ ₹300 ರಿಂದ ₹750ರವರೆಗೆ ವಿಶೇಷಭತ್ಯೆ ಸಿಗಲಿದೆ. ರಾಜಭವನ, ಮುಖ್ಯಮಂತ್ರಿ ಹಾಗೂ ಸಚಿವರ ಕಚೇರಿ, ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿಆಪ್ತ ಸಹಾಯಕರು, ಶೀಘ್ರ ಲಿಪಿಕಾರರು, ಪೊಲೀಸ್, ಲೋಕಾಯುಕ್ತ, ಅರಣ್ಯ, ಸಿಐಡಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಶೇಷ ವಿಭಾಗಗಳಿಗೆ ಅನ್ವಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT