ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ನೋಂದಣಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 18:14 IST
Last Updated 31 ಜನವರಿ 2021, 18:14 IST

ಬೆಂಗಳೂರು: ಇದೇ ಜೂನ್‌ನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಅರ್ಹ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲಾ ಲಾಗಿನ್‌ನಲ್ಲಿ ದಾಖಲಿಸುವಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎಲ್ಲ ಶಾಲೆಗಳಿಗೆ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದೆ.

ಪರೀಕ್ಷೆ ತೆಗೆದುಕೊಳ್ಳುವ ತಮ್ಮ ಶಾಲೆಯ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳ ವಿವರಗಳನ್ನು ಅಪ್‌ಲೋಡ್‌ ಮಾಡಲು http://sslc.karnataka.gov.in/ಜಾಲತಾಣವನ್ನು ಶಾಲಾ ಲಾಗಿನ್‌ ಮೂಲಕ ಸಂಪರ್ಕಿಸಬೇಕು. ಮುಖ್ಯಶಿಕ್ಷಕರು ತಮ್ಮ ಶಾಲಾ ಲಾಗಿನ್‌ನಲ್ಲಿ ಮಂಡಳಿಯ ವತಿಯಿಂದ ಈಗಾಗಲೇ ನೀಡಿರುವ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್‌ ಬಳಸಿ ಆನ್‌ಲೈನ್‌ನಲ್ಲಿಯೇ ನೋಂದಣಿ ಮಾಡಬೇಕು ಎಂದು ಮಂಡಳಿ ಆದೇಶಿಸಿದೆ.

ಶಾಲಾ ಲಾಗಿನ್‌ನಲ್ಲಿ ಸೃಜಿಸಲಾಗುವ ಚಲನ್‌ ಅನ್ನು ಬಳಸಿ, ಸಂಬಂಧಪಟ್ಟ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ಶುಲ್ಕ ಪಾವತಿಸಿ, ಮೂಲ ಚಲನ್‌ ಮಂಡಳಿಗೆ ಸಲ್ಲಿಸಬೇಕು. ಆಫ್‌ಲೈನ್ ಚಲನ್ ಬಳಸಿ ಶುಲ್ಕ ಪಾವತಿಸಿದ್ದಲ್ಲಿ ಅಂತಹ ಚಲನ್‌ಗಳನ್ನು ಪರಿಗಣಿಸುವುದಿಲ್ಲ ಎಂದೂ ಮಂಡಳಿ ಹೇಳಿದೆ.

ADVERTISEMENT

ಈ ಕುರಿತು ಯಾವುದೇ ಸಂದೇಹವಿದ್ದಲ್ಲಿ ಇದೇ 15ರೊಳಗೆ ಮಂಡಳಿಯ ಸಹಾಯವಾಣಿ 080–23310075, 080–23310076 ಸಂಪರ್ಕಿಸಬಹುದು ಎಂದು ಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.