ADVERTISEMENT

ಬನ್ನಿ, ತರಗತಿಗೆ ಹೋಗೋಣ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 4:00 IST
Last Updated 23 ಡಿಸೆಂಬರ್ 2020, 4:00 IST
ಡಾ.ಗಿರೀಶ ಪಾಟೀಲ
ಡಾ.ಗಿರೀಶ ಪಾಟೀಲ   

ಒತ್ತಡ ನಿವಾರಣೆಯಾಗುತ್ತದೆ

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದಲೂ ಶಿಕ್ಷಕರು ಹಾಗೂ ಸಹಪಾಠಿಗಳ ಜತೆಗೆ ಬೆರೆತಿಲ್ಲ. ಆನ್‌ಲೈನ್‌ ತರಗತಿಯಿಂದ ಮನೆಯಲ್ಲಿ ಒಂಟಿತನ ಕಾಡುತ್ತದೆ. ಈ ಒಂಟಿತನದಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಪಾಠದ ಯಾವುದಾದರೂ ಒಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದರೆ ಚರ್ಚಿಸಲು ಯಾರೂ ಸಿಗುವುದಿಲ್ಲ. ಆಫ್‌ಲೈನ್‌ ತರಗತಿ ಆರಂಭಿಸಿದರೆ ಸಹಪಾಠಿಗಳು ಹಾಗೂ ಶಿಕ್ಷಕರ ಜೊತೆಗಿನ ಸಂವಾದ ಹೆಚ್ಚುತ್ತದೆ. ಇದು ಉತ್ತಮ ಸ್ಕೋರ್‌ ಮಾಡುವಲ್ಲಿಯೂ ಸಹಕಾರಿ. ಶಾಲೆ ಆರಂಭವಾಗುತ್ತಿರುವುದು ನನಗೆ ಸಮಾಧಾನ ತಂದಿದೆ.

–ಸಾಕ್ಷಿ ಕಲ್ಲೇದೇವರ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ, ಕೆನ್‌ಬ್ರಿಡ್ಜ್‌, ಕಲಬುರ್ಗಿ

ADVERTISEMENT

ಸ್ವಚ್ಛಂದ ಪರಿಸರದಲ್ಲಿ ಕಲಿಕೆ ಅಗತ್ಯ

ಎಸ್ಸೆಸ್ಸೆಲ್ಸಿ ಹಾಗೂ ಪಿಯು ಮಕ್ಕಳ ತರಗತಿ ಆದಷ್ಟು ಬೇಗ ಆರಂಭಿಸಬೇಕು. ಮಕ್ಕಳು ಮನೆಯಲ್ಲಿಯೇ ಕುಳಿತು ಖಿನ್ನತೆಗೆ ಒಳಗಾಗುತ್ತಾರೆ. ಅವರ ಶಿಕ್ಷಕರು, ಮಾರ್ಗದರ್ಶಕರು, ಸ್ನೇಹಿತರ ಬಳಗದಲ್ಲಿ ಬೆರೆಯಲು ಕಾತರರಾಗಿದ್ದಾರೆ. ಮನೆಯಲ್ಲಿ ಸಾಕಷ್ಟು ನಿರ್ಬಂಧಗಳು ಇರುತ್ತವೆ. ಅವುಗಳನ್ನು ದಾಟಿ, ಸ್ವಚ್ಛಂದವಾದ ಪರಿಸರದಲ್ಲಿ ಕಲಿಯುವುದು ಮುಖ್ಯ. ಕೇವಲ ಎಸ್ಸೆಸ್ಸೆಲ್ಸಿ, ಪಿಯು ದ್ವಿತೀಯ ವರ್ಷದವರು ಮಾತ್ರವಲ್ಲ; 6ನೇ ತರಗತಿಯಿಂದ ಕೂಡ ಎಲ್ಲ ಆಫ್‌ಲೈನ್‌ ತರಗತಿ ಆರಂಭಿಸಬೇಕು ಎಂಬುದು ನನ್ನ ಸಲಹೆ.

–ಎನ್‌.ಎಸ್‌. ದೇವರಕಲ್‌, ಪ್ರಾಂಶುಪಾಲರು, ಎಸ್‌ಬಿಆರ್, ಕಲಬುರ್ಗಿ‌

ಎಸ್ಸೆಸ್ಸೆಲ್ಸಿ ಬೇಡ, ಪಿಯು ತರಗತಿ ಆರಂಭಿಸಿ

ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿಗಳು ದೊಡ್ಡವರಾಗಿರುತ್ತಾರೆ. ಯಾವುದು ಸುರಕ್ಷಿತ ಮಾರ್ಗ ಎಂಬ ಅರಿವು ಇರುತ್ತದೆ. ದೈಹಿಕವಾಗಿ, ಮಾನಸಿಕವಾಗಿಯೂ ಸದೃಢ ಇರುತ್ತಾರೆ. ಜತೆಗೆ, ಮುಂದಿನ ಶಿಕ್ಷಣಕ್ಕೆ ಸಿದ್ಧಗೊಳ್ಳಲು ಪ್ರಾಯೋಗಿಕ ತರಗತಿ, ಸಿಇಟಿ, ನೇಟ್‌ ಮುಂತಾದವುಗಳ ಅಭ್ಯಾಸ ಮಾಡಬೇಕಾಗಿದೆ. ಅವರಿಗೆ ಆಫ್‌ಲೈನ್‌ ತರಗತಿ ಆರಂಭಿಸುವುದು ಒಳಿತು. ನನ್ನ ಮಗಳು ಈ ಬಾರಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಯಸ್ಸು ಇನ್ನೂ ಚಿಕ್ಕದು. ಸ್ನೇಹಿತರೊಂದಿಗೆ ಗುಂಪುಗೂಡಿ ಹರಟುವುದು, ಅಂಗಡಿಗಳಲ್ಲಿ ಸಿಕ್ಕಿದ್ದನ್ನು ತಿನ್ನುವುದು, ಊಟ– ಪಾಠ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚು. ಹಾಗಾಗಿ, ಈ ತರಗತಿ ಇನ್ನಷ್ಟು ದಿನ ಆನ್‌ಲೈನ್‌ ಇದ್ದರೇ ಇಳಿತು.

–ಡಾ.ಗಿರೀಶ ಪಾಟೀಲ, ಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.