ADVERTISEMENT

ಸೇಂಟ್‌ ಜೋಸೆಫ್ಸ್‌ ವಿ.ವಿಗೆ ₹4 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:24 IST
Last Updated 25 ಜೂನ್ 2025, 16:24 IST
<div class="paragraphs"><p>ದಂಡ (ಸಾಂದರ್ಭಿಕ ಚಿತ್ರ)</p></div>

ದಂಡ (ಸಾಂದರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ಬೆಂಗಳೂರು: ಸರ್ಕಾರದ ಅನುಮೋದನೆ ಇಲ್ಲದೆ ಪ್ರವೇಶ, ಸೀಟುಗಳ ಹೆಚ್ಚಳ ಮತ್ತು ಹೊಸ ಕೋರ್ಸ್‌ಗಳನ್ನು ಪರಿಚಯಿಸಿದ ಸೇಂಟ್‌ ಜೋಸೆಫ್ಸ್‌ ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಇಲಾಖೆ ₹4 ಲಕ್ಷ ದಂಡ ವಿಧಿಸಿದೆ.

ADVERTISEMENT

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ರಚಿಸಿದ್ದ ತಜ್ಞರ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ, ಉನ್ನತ ಶಿಕ್ಷಣ ಇಲಾಖೆ ದಂಡ ವಿಧಿಸಿ, ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯವೊಂದಕ್ಕೆ ಸರ್ಕಾರ ದಂಡ ವಿಧಿಸಿರುವುದು ಇದೇ ಮೊದಲು.

2023-24 ಮತ್ತು 2024-25ನೇ ಶೈಕ್ಷಣಿಕ ಸಾಲಿನಲ್ಲಿ ವಿಶ್ವವಿದ್ಯಾಲಯ ನಿಯಮ ಉಲ್ಲಂಘಿಸಿ 500ಕ್ಕೂ ಹೆಚ್ಚು ಸೀಟುಗಳನ್ನು ಭರ್ತಿ ಮಾಡಿದೆ. ಸರ್ಕಾರದ ಅನುಮೋದನೆ ಇಲ್ಲದೆ 20ಕ್ಕೂ ಹೆಚ್ಚು ಹೊಸ ಪದವಿ ಕೋರ್ಸ್‌ಗಳನ್ನು ಪರಿಚಯಿಸಿತ್ತು. 

ವಿಶ್ವವಿದ್ಯಾನಿಲಯದಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ನಿಯಮದ ಪ್ರಕಾರ ಶೇ 60 ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ನೀಡಬೇಕು. ಈ ನಿಯಮವನ್ನೂ ಪಾಲಿಸಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಯಾವುದೇ ಹೊಸ ಕಾರ್ಯಕ್ರಮಗಳಿಗೆ ಸರ್ಕಾರ ಅನುಮೋದನೆ ನೀಡಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.