ADVERTISEMENT

ಬಿಯರ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 10:50 IST
Last Updated 8 ಫೆಬ್ರುವರಿ 2019, 10:50 IST
   

ಬೆಂಗಳೂರು: ಬಿಯರ್‌ ಹಾಗೂ ಆಲ್ಕೊಹಾಲ್ ಪ್ರಮಾಣ ಕಡಿಮೆ ಇರುವ ಪೇಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದರು.

ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಆಲ್ಕೊಹಾಲ್ ಪ್ರಮಾಣ ಕಡಿಮೆ ಇರುವ ಪೇಯಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಹಾಗೂ 2019–20 ಹಣಕಾಸು ವರ್ಷದಲ್ಲಿ ₹20,950 ಕೋಟಿ ವರಮಾನಸಂಗ್ರಹದ ಗುರಿ ಘೋಷಿಸಲಾಗಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ): ವಾಣಿಜ್ಯ ತೆರಿಗೆ ಇಲಾಖೆಗೆ ₹76,046 ಕೋಟಿ ವರಮಾನಸಂಗ್ರಹ ಗುರಿ ನಿಗದಿ ಪಡಿಸಲಾಗಿದೆ. ಜಿಎಸ್‌ಟಿ ಅಡಿಯಲ್ಲಿ ಆದಾಯ ಸರಿದೂಗದಿದ್ದರೆ, ಪರಿಹಾರ ಕಾಯ್ದೆಯಲ್ಲಿ ನಿಗದಿ ಪಡಿಸಿದಂತೆ ರಾಜ್ಯಗಳಿಗೆ 2025ರ ವರೆಗೂ ಪರಿಹಾರ ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ನಿರ್ಧರಿಸಿದೆ.

ADVERTISEMENT

ಜಿಎಸ್‌ಟಿ ಜಾರಿಗಾಗಿ ಹಿಂದಿನ ತೆರಿಗೆ ಬಾಕಿ ಕಡಿತಗೊಳಿಸಲು ಸಮಗ್ರ ಕರ ಸಮಾಧಾನ ಯೋಜನೆ ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.