ADVERTISEMENT

ಮಾಜಿ ಕುಸ್ತಿ ಪೈಲ್ವಾನರ ಮಾಸಾಶನ ₹ 1 ಸಾವಿರದಂತೆ ಹೆಚ್ಚಿಸಿ ಆದೇಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 11:26 IST
Last Updated 5 ಏಪ್ರಿಲ್ 2022, 11:26 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಪ್ರಸಕ್ತ ಸಾಲಿನ (2022-23) ಬಜೆಟ್‌ನಲ್ಲಿ ಘೋಷಿಸಿದಂತೆ, ಸಂಕಷ್ಟದಲ್ಲಿರುವ ಕುಸ್ತಿ ಪೈಲ್ವಾನರ ಮಾಸಾಶನವನ್ನು ₹ 1,000 ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯಮಟ್ಟದ ಕುಸ್ತಿ ಪೈಲ್ವಾನರ ಮಾಸಾಶನವನ್ನು ₹ 2,500ದಿಂದ ₹ 3,500, ರಾಷ್ಟ್ರಮಟ್ಟ ಕುಸ್ತಿ ಪೈಲ್ವಾನರ ಮಾಸಾಶನವನ್ನು ₹ 3,000ದಿಂದ ₹ 4,000, ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪೈಲ್ವಾನರ ಮಾಸಾಶನವನ್ನು ₹ 4,000ದಿಂದ ₹ 5000ಕ್ಕೆ ಹೆಚ್ಚಿಸಲಾಗಿದೆ. ಏಪ್ರಿಲ್ ಒಂದರಿಂದಲೇ ಈ ಆದೇಶ ಜಾರಿಯಾಗಲಿದೆ.

50 ವರ್ಷ ದಾಟಿದ, ಸಂಕಷ್ಟದಲ್ಲಿರುವ ಕುಸ್ತಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಮಾಸಾಶನ ಹೆಚ್ಚಿಸುವುದಾಗಿ ಬಜೆಟ್‌ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು.

ADVERTISEMENT

‘ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾಸಾಶನ ಹೆಚ್ಚಿಸುವುವಂತೆ ಮಾಜಿ ಕುಸ್ತಿ ಪೈಲ್ವಾನರು ಬೇಡಿಕೆ ಇಟ್ಟಿದ್ದರು. ಆಗ, ಹೆಚ್ಚಿಸುವುದಾಗಿ ಭರವಸೆ ನೀಡಿದ್ದೆ. ಅದರಂತೆ, ಬಜೆಟ್‌ನಲ್ಲಿ ಮಾಸಾಶನ ಹೆಚ್ಚಿಸಿ ಘೋಷಿಸಲಾಗಿತ್ತು. ಇದೀಗ ಆದೇಶ ಹೊರಡಿಸಲಾಗಿದೆ’ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.