ADVERTISEMENT

ಧಾರಾಕಾರ ಮಳೆ: ಕಲಬುರಗಿ-ಕಾಳಗಿ ನಡುವಿನ ರಾಜ್ಯ ಹೆದ್ದಾರಿ ಬಂದ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 3:00 IST
Last Updated 15 ಸೆಪ್ಟೆಂಬರ್ 2020, 3:00 IST
ಕಲಬುರ್ಗಿ ಜಿಲ್ಲೆಯ ‌ಕಾಳಗಿಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು
ಕಲಬುರ್ಗಿ ಜಿಲ್ಲೆಯ ‌ಕಾಳಗಿಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು   
""

ಕಾಳಗಿ: ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ ಸುರಿದ ಧಾರಾಕಾರ ಮಳೆಗೆ ಕಲಬುರ್ಗಿ-ಕಾಳಗಿ ರಾಜ್ಯಹೆದ್ದಾರಿ ಬಂದ್ ಆಗಿದೆ.

ಇಟಾಗ, ಖಾಜಾ ಕೋಟನೂರ್, ಬೋಳೆವಾಡ ಕಡೆಯಿಂದ ಹರಿದು ಬರುತ್ತಿರುವ ಮಳೆ ನೀರಿಗೆ ಕೋರವಾರ-ವಚ್ಛಾ ಸಂಪರ್ಕ ಸೇತುವೆ ಪೂರ್ಣ ಮುಳುಗಡೆಯಾಗಿದೆ. ಇದರಿಂದ ಕಾಳಗಿ ಹಾಗೂಕಲಬುರಗಿ ಮಧ್ಯೆ ಸಂಚರಿಸುವವಾಹನಗಳು ಮುಂದಕ್ಕೆ ಹೋಗಲಾಗದೆ ಕೋರವಾರ ಮತ್ತು ವಚ್ಚಾ ಬಳಿಯ ಹೆದ್ದಾರಿ ಮೇಲೆ ನಿಂತುಬಿಟ್ಟಿವೆ.

ಪದವಿ ಆರನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಕಲಬುರಗಿಗೆ ತೆರಳುತ್ತಿದ್ದ ಹಳ್ಳಿಗಳ ವಿದ್ಯಾರ್ಥಿಗಳು ದಿಕ್ಕು ತೋಚದೆ ಬಸ್ಸಿನಲ್ಲೆ ಉಳಿದಿದ್ದಾರೆ. ತುರ್ತು ತೆರಳಬೇಕಾದ ಸರ್ಕಾರಿ ನೌಕರರು ಅನ್ಯ ಮಾರ್ಗವಿಲ್ಲದೆ ಹೆದ್ದಾರಿ ಕಾಯುತ್ತಿದ್ದಾರೆ. ಒಟ್ಟಾರೆ ಈ ಹೆದ್ದಾರಿ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.

ADVERTISEMENT
ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.