ADVERTISEMENT

ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್ ಇಟ್ಟಿದ್ದಾರೆ: ಜಗದೀಶ್ ಶೆಟ್ಟರ್

'ಸಿಎಂ ಅಗಲು ಗೋಪ್ಯ ಕಾರ್ಯಾಚರಣೆ'

​ಪ್ರಜಾವಾಣಿ ವಾರ್ತೆ
Published 14 ಮೇ 2019, 10:30 IST
Last Updated 14 ಮೇ 2019, 10:30 IST
   

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರದ‌ ಪತನಕ್ಕಾಗಿ ಸಿದ್ದರಾಮಯ್ಯ ಅವರೇ ಟೈಂ ಬಾಂಬ್ ಇಟ್ಟಿದ್ದು, ಇದೇ 23ರ ನಂತರ ಅದು ಸ್ಫೋಟಗೊಳ್ಳಲಿದೆ ಎಂದು ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾಗಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯ ಹಿಂದೆ ಇರುವುದು ಸಿದ್ದರಾಮಯ್ಯ. ಕುಮಾರಸ್ವಾಮಿ ಅವರನ್ನು ಕುರ್ಚಿಯಿಂದ ಕೆಳಗಿಳಿಸಿ ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಗೋಪ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.

ಮಂಡ್ಯದಲ್ಲಿ ಸುಮಲತಾ ಅವರಿಗೆ ಪಕ್ಷೇತರ‌ ಅಭ್ಯರ್ಥಿಯಾಗಿ‌ ಕಣಕ್ಕಿಳಿಯುಂತೆ ಮಾಡಿದ್ದು ಸಹ ಸಿದ್ದರಾಮಯ್ಯ. ಚಲುವರಾಯಸ್ವಾಮಿ ಹೇಳಿಕೆ‌ ಹಿಂದೆ ಇರುವುದು ಸಹ ಅವರೇ. ಈಗ ಎರಡೂ ಪಕ್ಷಗಳ ಒಳ ಬೇಗುದಿ ಹೊರಗೆ ಬಂದಿದೆ ಎಂದರು.

ADVERTISEMENT

ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಗೊತ್ತಾದಾಗ ದೇವೇಗೌಡರು, ಕುಮಾರಸ್ವಾಮಿ ಅಳುತ್ತಾರೆ. ಒಂದು ವರ್ಷದಿಂದ ಅವರ ಸಹವಾಸ ಮಾಡಿರುವ ಡಿ.ಕೆ. ಶಿವಕುಮಾರ್ ಸಹ ಅಳುವುದನ್ನು ಕಲಿತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಚಿವ ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕ ಪ್ರಕರಣದ ವಿಡಿಯೊ ಡಿಲಿಟ್ ಆಗಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಆ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.