ADVERTISEMENT

ವಿಚಿತ್ರ ಮಗು ಜನನ; ಸಾವು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 12:08 IST
Last Updated 2 ಅಕ್ಟೋಬರ್ 2018, 12:08 IST
ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರಾತ್ರಿ ಚಂಗಡಹಳ್ಳಿ ಬಳಿಯ ಗೋನಳ್ಳಿ ಮೂರ್ತಿ–ಚಿನ್ನಮ್ಮ ದಂಪತಿಗೆ ಜನಿಸಿದ ವಿಚಿತ್ರ ಮಗು
ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರಾತ್ರಿ ಚಂಗಡಹಳ್ಳಿ ಬಳಿಯ ಗೋನಳ್ಳಿ ಮೂರ್ತಿ–ಚಿನ್ನಮ್ಮ ದಂಪತಿಗೆ ಜನಿಸಿದ ವಿಚಿತ್ರ ಮಗು   

ಶನಿವಾರಸಂತೆ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರಾತ್ರಿ 10 ಗಂಟೆಗೆ ಗಡಿಭಾಗ ಚಂಗಡಹಳ್ಳಿ ಬಳಿಯ ಗೋನಳ್ಳಿ ಗ್ರಾಮದ ಕೂಲಿ ಕಾರ್ಮಿಕರಾದ ಜಿ.ಕೆ.ಮೂರ್ತಿ–ಚಿನ್ನಮ್ಮ ದಂಪತಿಗೆ ವಿಚಿತ್ರ ಮಗುವೊಂದು ಜನಿಸಿದೆ.

8 ತಿಂಗಳ ಗರ್ಭಿಣಿ ಚಿನ್ನಮ್ಮ ಅವರಿಗೆ ಸೋಮವಾರ ಮಧ್ಯಾಹ್ನದ ನಂತರ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಶನಿವಾರಸಂತೆಗೆ ಬಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾದರು. ವೈದ್ಯರಿಲ್ಲದ ಕಾರಣ ದಾದಿ ಗೀತಾ ಹೆರಿಗೆ ಮಾಡಿಸಿದ್ದರು. ವಿಚಿತ್ರ ಮಗು ಜನಿಸಿದಾಗಲೇ ಮೃತಪಟ್ಟಿತ್ತು. ಮಗುವಿಗೆ ಜನನೇಂದ್ರಿಯ ಇರಲಿಲ್ಲ. 10 ಬೆರಳುಗಳ ಒಂದೇ ಕಾಲು, 6 ಇಂಚಿನ ಬಾಲವಿತ್ತು.

ಈ ವಿಚಿತ್ರ ಮಗುವಿನ ಜನನದ ಸುದ್ದಿ ಹರಡುತ್ತಿದ್ದಂತೆ ಮಂಗಳವಾರ ಬೆಳಿಗ್ಗೆ ನೋಡಲು ನೂರಾರು ಮಂದಿ ಆಸ್ಪತ್ರೆಗೆ ಧಾವಿಸಿದ್ದರು. ದುಃಖತಪ್ತ ತಂದೆ–ತಾಯಿ ಆರೋಗ್ಯ ಕೇಂದ್ರದ ಸಮೀಪದ ಜಾಗದಲ್ಲೇ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.