ಮುಧೋಳ (ಬಾಗಲಕೋಟೆ ಜಿಲ್ಲೆ):‘ನಿರಾಣಿ ಸಕ್ಕರೆ ಕಾರ್ಖಾನೆ ₹900 ಕೋಟಿ ರೈತರಿಗೆ ಪಾವತಿಸಿದೆ. ಬಾಕಿ ಉಳಿಸಿಕೊಂಡಿರುವುದು ಕೇವಲ ₹25 ಕೋಟಿ. ಅದನ್ನೂ ವಾರದೊಳಗೆ ಪಾವತಿಸಲಾಗುವುದು ಎಂದು ಹೇಳಿದರೂ ಸಕ್ಕರೆ ಮುಟ್ಟುಗೋಲು ಹಾಕಿಕೊಂಡಿರುವುದು ಸರಿಯಲ್ಲ’ ಎಂದು ಕಾರ್ಖಾನೆ ಅಧ್ಯಕ್ಷ, ಶಾಸಕ ಮುರುಗೇಶ ನಿರಾಣಿ ಅಸಮಾಧಾನ ವ್ಯಕ್ತಪಡಿಸಿದರು.
‘ಸರ್ಕಾರದ ಈ ಅವಸರದ ಕ್ರಮ ನೋವು ಹಾಗೂ ಆಘಾತವನ್ನು ಉಂಟು ಮಾಡಿದೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.