ADVERTISEMENT

ಬಿಜೆಪಿ ಮುಖಂಡ ಎಸ್‌.ಎಂ. ಕೃಷ್ಣ ಭೇಟಿ ಮಾಡಿದ ಸುಮಲತಾ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 12:01 IST
Last Updated 15 ಮಾರ್ಚ್ 2019, 12:01 IST
ಸುಮಲತಾ ಅವರು ಎಸ್‌.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದರು. ಚಿತ್ರ: ಎಎನ್‌ಐ ಟ್ವೀಟ್‌
ಸುಮಲತಾ ಅವರು ಎಸ್‌.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದರು. ಚಿತ್ರ: ಎಎನ್‌ಐ ಟ್ವೀಟ್‌   

ಬೆಂಗಳೂರು:ಮಂಡ್ಯ ಲೋಕಸಭಾ ಕ್ಷೇತ್ರ ಬಹು ಚರ್ಚೆಯ ವಿಷಯವಾಗಿರುವ ಬೆನ್ನಲ್ಲೇ, ನಟಿ ನುಮಲತಾ ಅಂಬರೀಷ್‌ ಅವರು ಶುಕ್ರವಾರ ಬಿಜೆಪಿ ಮುಖಂಡ, ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರನ್ನು ಭೇಡಿ ಮಾಡಿ ಮಾತನಾಡಿದ್ದಾರೆ.

ಬಳಿಕ, ಸುಮಲತಾ ಮತ್ತು ಎಸ್‌.ಎಂ. ಕೃಷ್ಣ ಅವರು ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

18ರ ಬಳಿಕ ಬೆಂಬಲಿಸುವ ನಿರ್ಧಾರ ಪ್ರಕಟ: ಕೃಷ್ಣ

ADVERTISEMENT

‘ಸುಮಲತಾ ಅವರು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುವ ಪ್ತಸ್ತಾವ ಮಾಡಿದ್ದಾರೆ. ನಾನು ಬಿಜೆಪಿ ವರಷ್ಠರ ಜತೆ ಮಾತನಾಡುವೆ. ಪಕ್ಷ ಟಿಕೆಟ್‌ ಘೋಷಣೆ ಮಾಡಲು ನಿಗಧಿ ಮಾಡಿರುವ ಮಾರ್ಚ್‌ 18ರ ಬಳಿಕ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸುತ್ತಾರೋ ಅಥವಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಸುಮಲತಾ ಅವರಿಗೆ ಬೆಂಬಲ ನೀಡುತ್ತಾರೋ ಎಂಬುದರ ಬಗ್ಗೆ ಸಮಗ್ರವಾದ ನಿರ್ಧಾರ ತೆಗೆದುಕೊಂಡು ನಮ್ಮ ಪ್ರಕಟಣೆ ಮಾಡುತ್ತೇವೆ’ ಎಂದು ಎಸ್‌.ಎಂ.ಕೃಷ್ಣ ಹೇಳಿದರು.

ಪೂರ್ಣದೃಷ್ಟಿ ಹಾಗೂ ಜಿಲ್ಲೆ ಮತ್ತು ಅದು ನಡೆದು ಬಂದ ದಾರಿ, ಸುಮಲತಾ ಅವರು ತೆಗೆದುಕೊಳ್ಳಬಹುದಾದ ನಿರ್ಧಾರದ ಮೇಲೆ ಬಿಜೆಪಿ ನಿರ್ಧಾರ ಮಾಡಲಿದ್ದಾರೆ. ಮಂಡ್ಯದಲ್ಲಿ ವ್ಯಕ್ತಿಗತ ವಿಚಾರಗಳಿಗಿಂತ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಚರ್ಚೆ ಮಾಡೋಣ ಎಂದು ಸುಮಲತಾ ಅವರು ಹೇಳಿದ್ದಾರೆ ಅವರ ಮಾತನ್ನು ನಾನು ಸಂಪೂರ್ಣ ಒಪ್ಪುತ್ತೇನೆ ಎಂದರು.

ಸುಮಲತಾ ಮೊದಲು ತಮ್ಮ ನಿಲುವನ್ನು ಹೇಳಲಿ. ಆ ನಂತರ ನಮ್ಮ(ಬಿಜೆಪಿ) ನಿರ್ಧಾರವನ್ನು ಹೇಳುತ್ತೇವೆ ಎಂದರು.

ಎಸ್‌.ಎಂ.ಕೃಷ್ಣ ಬೇರೆಯಲ್ಲ, ಬಿಜೆಪಿ ಬೇರೆಯಲ್ಲ. ಕೃಷ್ಣ ಈಗಾಗಲೇ ಬಿಜೆಪಿಯಲ್ಲಿ ಬೆರೆತುಹೋಗಿದ್ದಾರೆ. ಕುಟುಂಬ ರಾಜಕಾರಣವನ್ನು ನಾನು ತೀವ್ರವಾಗಿ ವಿರೋಧಿಸಿದ್ದೇನೆ ಎಂದು ಹೇಳಿದರು.

ಜನರ ತೀರ್ಮಾನವನ್ನು ಯಾರೂ ಬದಲಾಯಿಸಲಾಗಲ್ಲ: ಸುಮಲತಾ

ಸರ್ಕಾರಿ ಯಂತ್ರವನ್ನು ಸಿಎಂ ಕುಮಾರಸ್ವಾಮಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ, ಆರೋಪ ನಿಜನೋ ಸುಳ್ಳೋ ನನಗೆ ಗೊ‌ತ್ತಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ನಿಜ ಆದರೆ, ಅದು ತಪ್ಪು ಎಂದು ಎಲ್ಲರಿಗೂ ಗೊತ್ತಿದೆ. ಅದನ್ನು ಮಾಡಬಾರದು. ಅದನ್ನು ಮಾಡದೆ ತಡೆಯೋದು ಹೇಗೆ ಎಂದು ನನಗೆ ನಿಜವಾಗಿಯೂ ಗೊತ್ತಿಲ್ಲ. ಆದರೆ, ಏನೇ ಆಗಲಿ ಕೊನೆಗೆ ತೀರ್ಮಾನ ಮಾಡೋದು ಜನ. ನೀವು ಯಾವುದನ್ನು ಯಾವುದೇ ರೀತಿ ಬಳಸಿಕೊಳ್ಳಬಹುದು. ಅಧಿಕಾರ ಬಳಸಿಕೊಳ್ಳಬಹುದು. ಜನರ ತೀರ್ಮಾನವನ್ನು ಯಾರೂ ಬದಲಾಯಿಸಲಾಗಲ್ಲ ಎಂದು ಪ್ರತಿಕ್ರಿಯಿಸಿದರು.

ಫೇಸ್‌ಬುಕ್‌ನಲ್ಲಿ ರೈತರ ಪರ ಅಭಿಪ್ರಾಯಗಳ ಪೋಸ್ಟ್‌ಹಾಕಿರುವ ಕುರಿತು ಜೆಡಿಎಸ್‌ಗೆ ಪರೋಕ್ಷ ಟಾಂಗ್‌ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆಯಲ್ಲಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ, ‘ಈ ವೇಳೆ ಏನು ಮಾತನಾಡಿದರೂ ಅವರಿಗೆ ಟಾಂಕ್‌ ಕೊಟ್ಟು ಹೇಳಿದ್ದೀರಿ ಎನ್ನುತ್ತಾರೆ. ಆದರೆ, ನಾನು ನನ್ನ ಉದ್ದೇಶ ಮತ್ತು ಗುರಿ ಏನಿದಿಯೋ ಅದನ್ನು ಮಾಡುತ್ತಾ ಹೊರಟಿದ್ದೇನೆ’ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.