
ನವದೆಹಲಿ: ವಿಜಯಪುರ ಜಿಲ್ಲೆಯ ಜಲಗೇರಿ ಗ್ರಾಮದ ಅಮೋಘಸಿದ್ಧ ದೇವಸ್ಥಾನದಲ್ಲಿ ಆನುವಂಶೀಯ ಪೂಜಾರಿ ಹಕ್ಕುಗಳ ಕುರಿತಾದ ಶತಮಾನಗಳಷ್ಟು ಹಳೆಯದಾದ ವಿವಾದದಲ್ಲಿ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪ್ರತಿವಾದಿಗಳು ಪೂಜೆ ಸಲ್ಲಿಸಲು ಮತ್ತು ದೇವಾಲಯದ ಆಚರಣೆಗಳನ್ನು ನಡೆಸಲು ಅರ್ಹರಾದ ಆನುವಂಶಿಕ ವಹಿವತ್ದಾರ ಪೂಜಾರಿಗಳು ಎಂಬ ವಾದವನ್ನು ಪುರಸ್ಕರಿಸಿದೆ.
ಮಾಮಟ್ಟಿ ಗುಡ್ಡದಲ್ಲಿರುವ ಸಂತ ಅಮೋಘಸಿದ್ದ ಸಮಾಧಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಪ್ರತಿವಾದಿಗಳ ಆನುವಂಶಿಕ ಹಕ್ಕುಗಳನ್ನು ಗುರುತಿಸಿರುವ ಕರ್ನಾಟಕ ಹೈಕೋರ್ಟ್‌ನ 2012ರ ಅಕ್ಟೋಬರ್ 4ರ ತೀರ್ಪನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ಎತ್ತಿ ಹಿಡಿದಿದೆ.
ಪೂಜಾರಿ ಹಕ್ಕುಗಳು ಮತ್ತು ಭಕ್ತರಿಂದ ಸಂಗ್ರಹವಾಗುವ ಕಾಣಿಕೆಗಳ ಬಗ್ಗೆ ಓಗೆಪ್ಪ ಹಾಗೂ ಸಾಹೇಬಗೌಡ ಕುಟುಂಬಗಳ ನಡುವೆ ಶತಮಾನದಿಂದ ವಿವಾದ ಇದೆ. 1901 ಡಿಕ್ರಿಯ ಆಧಾರದಲ್ಲಿ ದೇವರ ಪೂಜೆ ಮಾಡುವ ಹಕ್ಕು ಪ್ರತಿಪಾದಿಸಿದ್ದ ಓಗೆಪ್ಪ ಕುಟುಂಬದವರ ಮೇಲ್ಮನವಿ ವಜಾಗೊಳಿಸಿತು.
ಮೇಲ್ಮನವಿದಾರರು ಶತಮಾನದಷ್ಟು ಹಳೆಯದಾದ ಡಿಕ್ರಿಯನ್ನು ಅವಲಂಬಿಸಿದ್ದರೂ, ಅವರ ಹೆಸರುಗಳು ಕಂದಾಯ ದಾಖಲೆಗಳಲ್ಲಿ ಇಲ್ಲ ಎಂಬುದನ್ನು ಪೀಠ ಗಮನಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.