ADVERTISEMENT

ಶಿಕ್ಷಕರಿಗೆ 15 ದಿನ ಸಾಂದರ್ಭಿಕ ರಜೆ, ಸಿ.ಎಂಗೆ ಸಚಿವರ ಪತ್ರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:53 IST
Last Updated 8 ನವೆಂಬರ್ 2019, 19:53 IST
   

ಬೆಂಗಳೂರು: ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರವನ್ನೂ ರಜಾ ದಿನವೆಂದು ಘೋಷಿಸಿದ್ದು,ಶಿಕ್ಷಕ ಸಮುದಾಯಕ್ಕೆ ಮಾತ್ರ ಈ ಹಿಂದಿನಂತೆಯೇ 15 ದಿನಗಳ ಸಾಂದರ್ಭಿಕ ರಜೆಯನ್ನೇ ಉಳಿಸಬೇಕು ಎಂದು ಕೋರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.

‘ಶಾಲಾ ಶಿಕ್ಷಕರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುವುದಿಲ್ಲ. ಆದರೆ ಅವರಿಗೆ ನೀಡಲಾಗುತ್ತಿದ್ದ ಸಾಂದರ್ಭಿಕ ರಜೆಗಳನ್ನು ಇತರ ಸರ್ಕಾರಿ ನೌಕರರಂತೆವಾರ್ಷಿಕ 10 ದಿನಗಳಿಗೆ ಕಡಿತಗೊಳಿಸಿದ್ದರಿಂದ ಅವರಿಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿಬಂದಿದೆ. ಈ ಆಗ್ರಹ ನ್ಯಾಯೋಚಿತವಾಗಿದೆ.

ಅವರಿಗೆ 15 ದಿನಗಳ ಸಾಂದರ್ಭಿಕ ರಜೆಗಳನ್ನು ಮೊದಲಿನಂತೆ ಮುಂದುವರಿಸಲು ಸರ್ಕಾರದ ರಜಾ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.