ADVERTISEMENT

ಶಿಕ್ಷಕರ ವರ್ಗಾವಣೆ ಮಸೂದೆಗೆ ಕಾಂಗ್ರೆಸಿಗರ ವಿರೋಧ

ಪ್ರತಿಭಟನೆ ಮಧ್ಯೆ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 4:03 IST
Last Updated 15 ಫೆಬ್ರುವರಿ 2019, 4:03 IST

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಮಸೂದೆ’ಗೆ ಕಾಂಗ್ರೆಸ್‌ನ ಕೆಲವು ಸದಸ್ಯರು ಗುರುವಾರವಿಧಾನಪರಿಷತ್ತಿನಲ್ಲಿ ವಿರೋಧ ವ್ಯಕ್ತಪಡಿಸಿ, ಆಯ್ಕೆ ಸಮಿತಿಗೆ ಪರಿಶೀಲಿಸಲು ಒಪ್ಪಿಸಬೇಕು ಎಂದು ಆಗ್ರಹಿಸಿದರು.

‘ಈ ತಿದ್ದುಪಡಿ ಜಾರಿಗೆ ತಂದರೆ, ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಬೀದಿ ಬೀದಿಯಲ್ಲಿ ವರ್ಗಾವಣೆಯ ದಂಧೆ ನಡೆಸುವ ದಲ್ಲಾಳಿಗಳು ಹುಟ್ಟಿಕೊಳ್ಳುತ್ತಾರೆ. ಇಂತಹ ಕೆಟ್ಟ ಮಸೂದೆಯಿಂದ ರಾಜ್ಯದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ. ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು’ ಎಂದು ಕಾಂಗ್ರೆಸ್‌ನ ಕೆಲವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯರ ವಿರೋಧವನ್ನೂ ಲೆಕ್ಕಿಸದ ಸಭಾನಾಯಕಿ ಜಯಮಾಲ ಅವರು ಮಸೂದೆಗೆ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾದರು. ಜೆಡಿಎಸ್‌ ಸದಸ್ಯರು ಮಸೂದೆ ಬೆಂಬಲಿಸಿದರೆ, ಬಿಜೆಪಿ ಸದಸ್ಯರು ವಿರೋಧಿಸಿದರು.ಕಾನೂನು ಮಾಡುವ ಸಂದರ್ಭ ಸಣ್ಣಪುಟ್ಟ ಬದಲಾವಣೆ ಮಾಡುವುದಾಗಿ ಜಯಮಾಲ ಭರವಸೆ ನೀಡಿದರು.

ADVERTISEMENT

*ಈ ತಿದ್ದುಪಡಿಯಿಂದ ನಿರಂಕುಶ ವ್ಯವಸ್ಥೆಗೆ ಕಾರಣವಾಗುತ್ತದೆ, ಆಡಳಿತ ಪಕ್ಷದ ನಾವೂ ವಿರೋಧ ಮಾಡುತ್ತೇವೆ

-ಎಸ್‌.ಆರ್‌.ಪಾಟೀಲ, ಕಾಂಗ್ರೆಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.