ADVERTISEMENT

ಹಿರಿಯ ಸಾಹಿತಿ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಗಣ್ಯರ ಸಂತಾಪ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 7:51 IST
Last Updated 17 ಮಾರ್ಚ್ 2020, 7:51 IST
ಪ್ರಜಾವಾಣಿ ಚಿತ್ರಗಳು- ತಾಜುದ್ಧೀನ್ ಆಜಾದ್
ಪ್ರಜಾವಾಣಿ ಚಿತ್ರಗಳು- ತಾಜುದ್ಧೀನ್ ಆಜಾದ್   
"ಪ್ರಜಾವಾಣಿ ಚಿತ್ರ- ತಾಜುದ್ಧೀನ್ ಆಜಾದ್"
"ಪ್ರಜಾವಾಣಿ ಚಿತ್ರ- ತಾಜುದ್ಧೀನ್ ಆಜಾದ್"
"ಪ್ರಜಾವಾಣಿ ಚಿತ್ರ- ತಾಜುದ್ಧೀನ್ ಆಜಾದ್"

ಹುಬ್ಬಳ್ಳಿ: ಪಾಟೀಲ ಪುಟ್ಟಪ್ಪ ಅವರದ್ದು ಚೇತೋಹಾರಿ ವ್ಯಕ್ತಿತ್ವವಾಗಿತ್ತು. ವೈಯಕ್ತಿಕ ಬದುಕಿಗಿಂತ ಅವರು ನಾಡು, ನುಡಿಗೆ ಬದುಕನ್ನು ಮೀಸಲಿಟ್ಟಿದ್ದರು ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಾಟೀಲ ಪುಟ್ಟಪ್ಪ ಅವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಅವರು, 'ಪಾಪು ಕನ್ನಡ ನಾಡಿನ ಆಸ್ತಿ. ಅವರ ಕನ್ನಡದ ಸೇವೆ ಪರಿಗಣಿಸಿ ನಾಡೋಜ ಪ್ರಶಸ್ತಿ ನೀಡಲಾಗಿದೆ. ಸರಳತನದಿಂದ ಬಾಳಿ, ಬದುಕಿದ ಅವರು ನಾಡಿಗೆ ಉತ್ತಮ ಮೌಲ್ಯ ತೋರಿಸಿದ್ದರು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ' ಎಂದು ಸಂತಾಪ ವ್ಯಕ್ತಪಡಿಸಿದರು.

'ನಾಡಿನ ಇತಿಹಾಸ ಹಾಗೂ ಹೋರಾಟದ ಪ್ರತಿಯೊಂದು ಕ್ಷಣದಲ್ಲೂ ಗಮನಿಸಿದರೆ, ಹೋರಾಟದ ಪ್ರತಿಯೊಂದು ಕ್ಷಣದಲ್ಲಿ ಪಾಪು ಕಾಣುತ್ತಿದ್ದಾರೆ. ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿ ಕಳೆದುಕೊಂಡು ಬಡವರಾಗಿದ್ದೇವೆ' ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.

ADVERTISEMENT

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, 'ಕನ್ನಡಕ್ಕಾಗಿ ಹುಟ್ಟಿದವರು. ಕನ್ನಡಕ್ಕಾಗಿಯೇ ಬದುಕಿದವರು. ಕೊನೆವರೆಗೂ ಕನ್ನಡಕ್ಕಾಗಿಯೇ ಹೋರಾಡಿದ ಮಹಾನ್ ವ್ಯಕ್ತಿ ಪಾಟೀಲ ಪುಟ್ಟಪ್ಪ' ಎಂದು ಹೇಳಿದರು.

ಪುಟ್ಟಪ್ಪ ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಕನ್ನಡ ನಾಡಿಗಾಗಿ ಅವರು ಸಲ್ಲಿಸಿದ ಸೇವೆ ದೀರ್ಘಕಾಲದ್ದು. ಅವರ ಸ್ಥಾನ ಯಾರಿಂದಲೂ ತುಂಬಲು ಸಾಧ್ಯವಿಲ್ಲವೆಂದು ಬಿಜೆಪಿ ಮುಖಂಡ ಚಂದ್ರಕಾಂತ ಬೆಲ್ಲದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.