ADVERTISEMENT

ಬೆಳಗಾವಿ: 2 ತಾಸಿನಲ್ಲಿ 5,100 ಸಸಿ ನೆಟ್ಟರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:23 IST
Last Updated 15 ಡಿಸೆಂಬರ್ 2019, 13:23 IST
ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದ ಆವರಣದಲ್ಲಿ ಭಾನುವಾರ ನಡೆದ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ ಚಾಲನೆ ನೀಡಿದರು
ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದ ಆವರಣದಲ್ಲಿ ಭಾನುವಾರ ನಡೆದ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ ಚಾಲನೆ ನೀಡಿದರು   

ಬೆಳಗಾವಿ: ತಾಲ್ಲೂಕಿನ ಸಾಂಬ್ರಾದಲ್ಲಿರುವ ವಿಮಾನನಿಲ್ದಾಣಕ್ಕೆ ಸೇರಿದ ಖಾಲಿ ಜಾಗದಲ್ಲಿ ಗ್ರೀನ್‌ ಸೇವಿಯರ್ಸ್‌ ತಂಡದವರು ಹಾಗೂ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಭಾನುವಾರ ಬೆಳಿಗ್ಗೆ ಕೇವಲ ಎರಡು ತಾಸುಗಳಲ್ಲಿ 5,100 ಸಸಿಗಳನ್ನು ನೆಟ್ಟರು. ಈ ವನ ಮಹೋತ್ಸವ ಕಾರ್ಯಕ್ರಮದಲ್ಲಿ 800 ಮಂದಿ ಭಾಗವಹಿಸಿದ್ದರು.

ಯೋಜನೆಗೆ ರೋಟರಿ ಕ್ಲಬ್‌, ಸೂರ್ಯೋದಯ ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌, ಡ್ರೀಂ ಫ್ಲೈ ಏವಿಯಷೇನ್‌ನವರು ಕೈಜೋಡಿಸಿದ್ದಾರೆ.

ಕೆಎಲ್ಇ ಜಿಎ ಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳು, ಗೋಗಟೆ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು, ಪಂತ ಬಾಳೇಕುಂದ್ರಿ ಶಾಲೆ, ಜಿನಗೌಡ ಸಮೂಹ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ADVERTISEMENT

ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣೀಕರ, ಪ್ಯಾಸ್‌ ಪ್ರತಿಷ್ಠಾನದ ಡಾ.ಮಾಧವ ಪ್ರಭು, ಬೂಂಧ್‌ ಸಂಸ್ಥೆಯ ಆರತಿ ಭಂಡಾರೆ ಅವರು ಸಸಿ ನೆಟ್ಟು ಚಾಲನೆ ನೀಡಿದರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ‍ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌, ಏರ್‌ಮನ್‌ ತರಬೇತಿ ಶಾಲೆಯ ಗ್ರೂಪ್ ಕ್ಯಾಪ್ಟನ್‌ ಆರ್‌.ಕೆ. ಪ್ರಸಾದ್, ಡಾ.ಜಯಶಂಕರ್‌ ಯಾದವ್, ಕುಸ್ತಿ‍ಪಟು ಅತುಲ್ ಶಿರೋಳೆ, ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ ಮೌರ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.