ADVERTISEMENT

ಪಥಸಂಚಲನ: ಹೆಲ್ಮೆಟ್‌ ಧರಿಸಿ ಭಾಗಿಯಾದ ಮಕ್ಕಳು!

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 14:15 IST
Last Updated 15 ಆಗಸ್ಟ್ 2019, 14:15 IST
ಬೆಳಗಾವಿಯಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ಹಲಗಾ ಶಾರದಾ ಶಾಲೆಯ ವಿದ್ಯಾರ್ಥಿನಿಯರು ಹೆಲ್ಮೆಟ್‌ ಧರಿಸಿ ಪಾಲ್ಗೊಂಡಿದ್ದರು
ಬೆಳಗಾವಿಯಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ಹಲಗಾ ಶಾರದಾ ಶಾಲೆಯ ವಿದ್ಯಾರ್ಥಿನಿಯರು ಹೆಲ್ಮೆಟ್‌ ಧರಿಸಿ ಪಾಲ್ಗೊಂಡಿದ್ದರು   

ಬೆಳಗಾವಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ತಾಲ್ಲೂಕಿನ ಹಲಗಾ ಶಾರದಾ ಶಾಲೆ ವಿದ್ಯಾರ್ಥಿನಿಯರು ಹೆಲ್ಮೆಟ್‌ ಧರಿಸಿ ಭಾಗವಹಿಸಿ ಗಮನಸೆಳೆದರು.

‘ದ್ವಿಚಕ್ರವಾಹನಗಳಲ್ಲಿ ಹೋಗುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಸಂಚಾರ ನಿಯಮಗಳನ್ನು ಪಾಲಿಸಬೇಕು’ ಎಂದು ಜಾಗೃತಿ ಮೂಡಿಸುವ ಉದ್ದೇಶದಿಂದ ಹೆಲ್ಮೆಟ್‌ ಹಾಕಿದ್ದೆವು’ ಎಂದು ತಿಳಿಸಿದರು.

ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.