ADVERTISEMENT

ಹಿರೇಕೆರೂರು | ಕೃಷಿ ಸಚಿವರಿಗೆ ಮನೆಯಲ್ಲೇ ಲಸಿಕೆ ಪ್ರಕರಣ: ಟಿಎಚ್‌ಒ ಅಮಾನತು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 19:09 IST
Last Updated 1 ಏಪ್ರಿಲ್ 2021, 19:09 IST
ಡಾ.ಝಡ್‌.ಆರ್‌. ಮಕಾನದಾರ್‌, ಟಿಎಚ್‌ಒ, ಹಿರೇಕೆರೂರು 
ಡಾ.ಝಡ್‌.ಆರ್‌. ಮಕಾನದಾರ್‌, ಟಿಎಚ್‌ಒ, ಹಿರೇಕೆರೂರು    

ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಅವರ ನಿವಾಸದಲ್ಲೇ ಕೋವಿಡ್‌ ಲಸಿಕೆ ನೀಡಿ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಹಿರೇಕೆರೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಝಡ್‌.ಆರ್‌.ಮಕಾನದಾರ್‌ ಅವರನ್ನುಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕೋವಿಡ್‌ ಲಸಿಕೆಯನ್ನು ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ನೀಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನವಿದ್ದರೂ,ಮಾರ್ಚ್‌ 2ರಂದು ಕೃಷಿ ಸಚಿವ ಮತ್ತು ಅವರ ಪತ್ನಿಗೆ, ಹಿರೇಕೆರೂರಿನಲ್ಲಿರುವ ಅವರ ಮನೆಯಲ್ಲೇ ವೈದ್ಯಕೀಯ ಸಿಬ್ಬಂದಿ ಲಸಿಕೆ ಹಾಕಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಯ ಗಮನಕ್ಕೆ ತಂದಿರಲಿಲ್ಲ ಎಂದು ಡಿಎಚ್‌ಒ ಅವರು ಮೇಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

‘ಕೃಷಿ ಸಚಿವರ ಕರೆಯ ಮೇರೆಗೆ ಅವರ ಮನೆಗೆ ತೆರಳಿ ಇಲಾಖೆ ಸಿಬ್ಬಂದಿ ಕೋವಿಡ್‌–19 ಲಸಿಕೆ ನೀಡಿ, ನಂತರ ಮಾರ್ಗಸೂಚಿ ಅನ್ವಯ 30 ನಿಮಿಷಗಳವರೆಗೆ ನಿಗಾವಹಿಸಿದ್ದರು’ ಎಂದು ಟಿಎಚ್‌ಒ ಮಕಾನ್‌ದಾರ್‌ ಅವರು ಡಿಎಚ್‌ಒ ಅವರು ನೀಡಿದ ನೋಟಿಸ್‌ಗೆ ಸ್ಪಷ್ಟೀಕರಣ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.