ADVERTISEMENT

ಪಿಲಿಕುಳ: ಐದು ಮರಿಗಳಿಗೆ ಜನ್ಮ ನೀಡಿದ `ರಾಣಿ' ಹುಲಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 11:07 IST
Last Updated 1 ಸೆಪ್ಟೆಂಬರ್ 2019, 11:07 IST
ಮಂಗಳೂರಿನ ವಾಮಂಜೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ‘ರಾಣಿ’ ಹುಲಿ
ಮಂಗಳೂರಿನ ವಾಮಂಜೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ‘ರಾಣಿ’ ಹುಲಿ   

ಬಜ್ಪೆ: ಮಂಗಳೂರು ತಾಲ್ಲೂಕಿನ ವಾಮಂಜೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಎಂಟು ವರ್ಷದ ‘ರಾಣಿ' ಹೆಸರಿನ ಹುಲಿ ಐದು ಮರಿಗಳಿಗೆ ಜನ್ಮ ನೀಡಿದೆ.

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಪಿಲಿಕುಳಕ್ಕೆ ‘ರಾಣಿ’ಯನ್ನು ಈಚೆಗೆ ತರಲಾಗಿತ್ತು. ಮರಿಗಳು ಆರೋಗ್ಯವಾಗಿದ್ದು, ರೋಗ ನಿರೋಧಕ ಲಸಿಕೆ ನೀಡಿದ ಬಳಿಕ ಉದ್ಯಾನ ಸಂದರ್ಶಕರಿಗೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ಶೀಘ್ರವೇ ತಿರುವನಂತಪುರಂ ಮೃಗಾಲಯದಿಂದ ರಿಯಾ ಪಕ್ಷಿ ಹಾಗೂ ತಿರುಪತಿ ಮೃಗಾಲಯದಿಂದ ಹುಲಿಗಳನ್ನು ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಇಲ್ಲಿಗೆ ವಿಶಾಖಪಟ್ಟಣಂ ಮೃಗಾಲಯದಿಂದ ತರಲಾಗಿರುವ ಸೀಳುನಾಯಿ(ದೋಳ್)ಯೂ ಮೂರು ಮರಿಗಳಿಗೆ ಜನ್ಮ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.