ADVERTISEMENT

ಟೋಲ್‌ ಶುಲ್ಕ ವಿನಾಯ್ತಿ: ಹೋರಾಟಕ್ಕೆ ವಕೀಲರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 19:51 IST
Last Updated 19 ಜುಲೈ 2018, 19:51 IST

ಬೆಂಗಳೂರು: ವಕೀಲರಿಗೆ ಟೋಲ್‌ ಶುಲ್ಕ ವಿನಾಯ್ತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ವಕೀಲರ ಸಂಘಗಳ ನೇತೃತ್ವದಲ್ಲಿ ಒಕ್ಕೂಟ ರಚಿಸಿ ಹೋರಾಟ ಮಾಡಲು ಬೆಂಗಳೂರು ವಕೀಲರ ಸಂಘ ನಿರ್ಧರಿಸಿದೆ.

‘ಈ ಕುರಿತು ಗುರುವಾರ ನಡೆದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ತಿಳಿಸಿದ್ದಾರೆ.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

ADVERTISEMENT

*ಸೀತಾರಾಂ ಯಚೂರಿ ನೇತೃತ್ವದ ಸಂಸದೀಯ ಸಮಿತಿ ವರದಿ ಅನುಷ್ಠಾನಗೊಳಿಸಬೇಕು.

* ಖಾಸಗಿ ವಾಹನಗಳಿಗೆ ಟೋಲ್‌ ವಿನಾಯ್ತಿ ನೀಡಲು ಕಾನೂನಿಗೆ ತಿದ್ದುಪಡಿ ತರುವಂತೆ ಆಗ್ರಹಪ
ಡಿಸಲು ಚಿಂತನೆ.

* ದೇಶದಾದ್ಯಂತ ಟೋಲ್‌ಗಳಲ್ಲಿ ವಕೀಲರಿಂದ ಶುಲ್ಕವನ್ನು ಪಡೆಯದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ.

* ವಕೀಲರಿಗೆ ಟೋಲ್‌ ಶುಲ್ಕ ವಿನಾಯ್ತಿ ನೀಡದಿದ್ದರೆ ಕಾನೂನು ಹೋರಾಟಕ್ಕೆ ಸಜ್ಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.