ADVERTISEMENT

ಟೊಯೊಟಾ: ಮತ್ತೆ ಐವರು ಕಾರ್ಮಿಕರು ಅಮಾನತು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 21:22 IST
Last Updated 22 ಡಿಸೆಂಬರ್ 2020, 21:22 IST
   

ಬಿಡದಿ (ರಾಮನಗರ): ಕಂಪನಿ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ ಕಂಪನಿ ಮತ್ತೆ ತನ್ನ ಐವರು ಕಾರ್ಮಿಕರನ್ನು ಅಮಾನತು ಮಾಡಿದೆ.

ಇದರಿಂದ ಅಮಾನತುಗೊಂಡವರ ಸಂಖ್ಯೆ 66ಕ್ಕೆ ಏರಿಕೆ ಆಗಿದೆ.

ಸಹ ಕಾರ್ಮಿಕರಿಗೆ ಬೆದರಿಕೆ ಹಾಕಿ ಕೆಲಸಕ್ಕೆ ಹೋಗದಂತೆ ತಡೆದದ್ದು, ಅಧಿಕಾರಿಗಳಿಗೆ ಬಹಿರಂಗ ನಿಂದನೆ ಹಾಗೂ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿ ಹೆಸರಿಗೆ ಧಕ್ಕೆ ಆಗುವಂತೆ ಕೆಲಸ ಮಾಡಿದ್ದ ಆರೋಪದಡಿ ಐವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ತನಿಖೆ ನಡೆಸುವುದಾಗಿಯೂ ಕಂಪನಿಯು ನೋಟಿಸ್‌ನಲ್ಲಿ ತಿಳಿಸಿದೆ.

ADVERTISEMENT

ಕಾರ್ಮಿಕ ಸಂಘವು ಇದಕ್ಕೆ, ‘ವಿನಾಕಾರಣ ಆರೋಪ ಹೊರಿಸಿ ಅಮಾನತು ಮಾಡಲಾಗಿದೆ. ಇದು ಹತಾಶ ಹಾಗೂ ಸೇಡಿನ ಪ್ರಕ್ರಿಯೆಯಾಗಿದೆ’ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.