ADVERTISEMENT

ಪಠ್ಯ– ಯಾರೋ ಹೇಳಿಕೊಟ್ಟ ತುತ್ತೂರಿ ಊದಬೇಡಿ: ವಸಂತಕುಮಾರ್‌ಗೆ ಟಿಆರ್‌ಸಿ ತಿರುಗೇಟು

ಪಠ್ಯ ಪರಿಷ್ಕರಣೆ: ವಸಂತಕುಮಾರ್‌ ಹೇಳಿಕೆಗೆ ‌ಟೀಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 21:18 IST
Last Updated 26 ಜೂನ್ 2022, 21:18 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ    

ಬೆಂಗಳೂರು: ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತ ಕುಮಾರ್ ಅವರು ಯಾರೋ ಹೇಳಿ ಕೊಟ್ಟ ತುತ್ತೂರಿ ಊದುವ ಬದಲು, ಪೂರ್ವಗ್ರಹದಿಂದ ಹೊರಬಂದು ಅಧ್ಯಯನ ನಡೆಸಿ, ಸ್ವಂತಿಕೆಯಿಂದ ಮಾತನಾಡಬೇಕು’ ಎಂದು6 ಮತ್ತು 7ನೇ ತರಗತಿ ಸಮಾಜ ವಿಜ್ಞಾನ ಪಠ್ಯಪರಿಷ್ಕರಣ ಸಮಿತಿಯ ಹಿಂದಿನ ಅಧ್ಯಕ್ಷ ಪ್ರೊ.ಟಿ.ಆರ್. ಚಂದ್ರಶೇಖರ್ ಹೇಳಿ ದ್ದಾರೆ.

‘ಪಠ್ಯಪರಿಷ್ಕರಣೆ ವಿಚಾರದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಹೇಳಿಕೆಯಲ್ಲಿಯೇ ಪಕ್ಷದ ವಾಸನೆ ಇದೆ’ ಎಂಬ ವಸಂತಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ‘ವಸಂತಕುಮಾರ್ ಮತ್ತು ಅವರ ಪರಿವಾರದವರು ಸುಳ್ಳು ಆರೋ ಪಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು. ಈಗಲೂ ಅವರು ಬರಗೂರರ ವ್ಯಕ್ತಿತ್ವಕ್ಕೆ ಮಸಿಬಳಿಯಲು ಹೋಗಿ ತಮ್ಮ ಮುಖಕ್ಕೆ ಮಸಿ ಬಳಿದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

‘6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ‘ಅಲಿಘಡ ಚಳವಳಿ’ ಪಾಠವೇ ಇಲ್ಲ. ‘ಅಲಿಘರ್ ಚಳವಳಿ ಮತ್ತು ಸರ್ ಸಯ್ಯದ್ ಅಹ್ಮದ್‍ಖಾನ್’ ಎಂಬ ಪಠ್ಯವನ್ನೇ ಬರಗೂರರ ಸಮಿತಿ ಯಥಾವತ್ತಾಗಿ ತೆಗೆದುಕೊಂಡು ಅದೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿ ಸಿದೆ. ಹೆಚ್ಚುವರಿಯಾಗಿ ‘1875ರಲ್ಲಿ ಮಹ ಮಡನ್ ಆಂಗ್ಲೋ ಓರಿಯಂಟಲ್ ಕಾಲೇ ಜನ್ನು ಆರಂಭಿಸಿದರು. ಈ ಸಂಸ್ಥೆಯೇ 1920ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿತು’ ಎಂಬುದ ನಷ್ಟೇ ಸೇರಿಸಲಾಗಿದೆ’

ADVERTISEMENT

‘ಪ್ರಭುತ್ವ’ ಪಠ್ಯದಲ್ಲಿ ಸರ್ವಾಧಿಕಾರಿ ಸರ್ಕಾರವನ್ನು ಪರಿಚಯಿಸಿದ ಮಾತ್ರಕ್ಕೆ ಬರಗೂರು ಆ ಸರ್ಕಾರದ ಪರ ಎಂದು ಹೇಳಲಾಗುತ್ತದೆಯೇ? 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಭಾರತ ನಮ್ಮ ಮಾತೃಭೂಮಿ’ ಪಾಠದ ಹೆಸರನ್ನು ಬದಲಿಸಿದ ಮಾತ್ರಕ್ಕೆ ಅವರು ಮಾತೃಭೂಮಿಗೆ ವಿರೋಧಿ ಎಂದು ಹೇಳುವುದು ಮೂರ್ಖತನದ್ದಾಗುತ್ತದೆ. ಪಠ್ಯಪುಸ್ತಕ ಪರಿಷ್ಕರಣೆ ಆಗಬೇಕು ಎಂಬುದನ್ನು ಬರಗೂರು ಕೂಡಾ ಒಪ್ಪುತ್ತಾರೆ. ಆದರೆ, ಪರಿಷ್ಕರಣೆಯು ನಿಜವಾದ ಶಿಕ್ಷಣ ತಜ್ಞರಿಂದ ಕ್ರಮಬದ್ಧವಾಗಿ ನಡೆಯಬೇಕೆಂದು ಪ್ರತಿಪಾದಿಸುತ್ತಲೇ ಬರುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.