ಹುಬ್ಬಳ್ಳಿ: ಜೋಡಿಮಾರ್ಗ ಕಾಮಗಾರಿ ನಡೆಯುತ್ತಿರುವುದರಿಂದ ಈ ಕೆಳಗಿನ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಕೆ.ಎಸ್.ಆರ್.ಬೆಂಗಳೂರು-ಕೊಲ್ಹಾಪುರ ಎಕ್ಸ್ಪ್ರೆಸ್ (16589) ಸಂಚಾರವನ್ನು ಜುಲೈ 6ರ ವರೆಗೆ ಮಿರಜ್ ಮತ್ತು ಕೊಲ್ಹಾಪುರದ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ಅವಧಿಯಲ್ಲಿ ಈ ರೈಲು ಮಿರಜ್ ವರೆಗೆ ಮಾತ್ರ ಸಂಚರಿಸಲಿದೆ.
ಕೊಲ್ಹಾಪುರ-ಕೆ.ಎಸ್.ಆರ್.ಬೆಂಗಳೂರು ಎಕ್ಸ್ಪ್ರೆಸ್(16590) ಸಂಚಾರವನ್ನು ಜುಲೈ 7ರ ವರೆಗೆ ಕೊಲ್ಹಾಪುರ ಮತ್ತು ಮಿರಜ್ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ಅವಧಿಯಲ್ಲಿ ಈ ರೈಲು ಕೊಲ್ಹಾಪುರದ ಬದಲಾಗಿ ಮಿರಜ್ನಿಂದ ಸಂಚಾರ ಆರಂಭಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.