ADVERTISEMENT

ಹಿಜಾಬ್: ಪರಿಹಾರಕ್ಕೆ ಮಂಗಳೂರು ವಿದ್ಯಾರ್ಥಿ ಸಮನ್ವಯ ಸಮಿತಿಯಿಂದ 2 ದಿನ ಗಡುವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 17:43 IST
Last Updated 3 ಜೂನ್ 2022, 17:43 IST

ಮಂಗಳೂರು: ‘ಹೈಕೋರ್ಟ್‌ ತೀರ್ಪಿಗೆ ಅಲ್ಲ, ಎಬಿ‍ವಿಪಿ ಮುಖಂಡರ ಒತ್ತಡಕ್ಕೆ ಮಣಿದು ಮಂಗಳೂರು ವಿಶ್ವ
ವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರು ಹಿಜಾಬ್ ನಿಷೇಧಿಸಿದ್ದಾರೆ ಎಂದು ಮಂಗಳೂರು ವಿವಿ ವಿದ್ಯಾರ್ಥಿ ಸಮನ್ವಯ ಸಮಿತಿ ಆರೋಪಿಸಿದೆ. ಎರಡು ದಿನದಲ್ಲಿ ಸಮಸ್ಯೆ ಪರಿಹರಿಸದೇ ಇದ್ದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.

‘ಹೈಕೋರ್ಟ್ ತೀರ್ಪು ಬಂದು ಎರಡು ತಿಂಗಳ ನಂತರ ಹಿಜಾಬ್ ಬಳಕೆ ನಿಷೇಧಿಸಲಾಗಿದೆ. ವಿದ್ಯಾರ್ಥಿ ಸಂಘಟನೆ ಚುನಾವಣೆಯಲ್ಲಿ ಆಯ್ಕೆಯಾದ ಎಬಿವಿಪಿ ಮುಖಂಡರ ಒತ್ತಡದಿಂದ ಈ ಎಲ್ಲವೂ ನಡೆದಿದೆ’ ಎಂದು ವಿದ್ಯಾರ್ಥಿನಿ ಗೌಸಿಯಾ ಶಸ್ಮಾ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಜಾಬ್ ನಿಷೇಧ ಹೇರಿ ಮೇ 16ರಂದು ರಾತ್ರಿ ಪ್ರಾಂಶುಪಾಲರು ದಿಢೀರ್ ಆದೇಶ ಹೊರಡಿಸಿದರು. ಪ್ರಶ್ನಿಸಿದ್ದಕ್ಕೆ ಕುಲಪತಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಸುತ್ತಾಡಿಸಿ
ದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಹಿಜಾಬ್‌ ಧರಿಸಿ ಹಾಜರಾಗಲು ಕೆಲ ಪ್ರಾಧ್ಯಾಪಕರು ಅನುವು ಮಾಡಿದರೂ ಅವರನ್ನು ಬೆದರಿಸಿದ್ದಾರೆ’ ಎಂದು ಗೌಸಿಯಾ ದೂರಿದರು. ಸಮಿತಿಯ ಸಂಚಾಲಕ ಅಶಾನ್, ವಿದ್ಯಾರ್ಥಿನಿಯರಾದ ಫಾತಿಮಾ, ಮಾಶಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.