ADVERTISEMENT

ಇಬ್ಬರು ಶಾಸಕರಿಗೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 17:00 IST
Last Updated 20 ಏಪ್ರಿಲ್ 2021, 17:00 IST
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ   

ಮುದ್ದೇಬಿಹಾಳ (ವಿಜಯಪುರ): ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಅವರ ತಂದೆ ಸಂಗನಗೌಡ ಪಾಟೀಲ ಅವರಿಗೆ ಮಂಗಳವಾರ ಕೋವಿಡ್‌ ದೃಢ ಪಟ್ಟಿದೆ.

ಸೋಂಕಿನ ಲಕ್ಷಣಗಳು ಇಲ್ಲದೇ ಇರುವುದರಿಂದ ಹೋಂ ಐಸೋಲೇಶನ್ ಗೆ ಒಳಗಾಗಲು ವಿಜಯಪುರದ ಜಿಲ್ಲಾ ಆಸ್ಪತ್ರೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಇಲ್ಲಿನ ತಮ್ಮ ನಿವಾಸಕ್ಕೆ ಶಾಸಕರು ಮರಳಿದ್ದಾರೆ. ಮುನ್ನೆಚ್ಚರಿಕೆಯಾಗಿ 15 ದಿನ ಅವರ ಗೃಹ ಕಚೇರಿ ಸಂಪೂರ್ಣ ಬಂದ್ ಆಗಲಿದೆ’ ಎಂದು ಶಾಸಕರ ಆಪ್ತರು ತಿಳಿಸಿದ್ದಾರೆ.

ಅಜಯಸಿಂಗ್‌ಗೆ ಕೋವಿಡ್‌ (ಕಲಬುರ್ಗಿ ವರದಿ): ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಅವರು ಬೆಂಗಳೂರಿನ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.