ADVERTISEMENT

ಗಣಿ, ಭೂವಿಜ್ಞಾನ ಇಲಾಖೆ ನೌಕರರಿಗೆ ಸಮವಸ್ತ್ರ, ವಾಕಿಟಾಕಿ -ಸಚಿವ ಮುರುಗೇಶ ನಿರಾಣಿ

ಅಕ್ರಮ ಗಣಿಗಾರಿಕೆ ತಡೆಗೆ ನಿವೃತ್ತ ಯೋಧರ ಬಳಕೆ:

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 11:45 IST
Last Updated 5 ಏಪ್ರಿಲ್ 2021, 11:45 IST
   

ಬಾಗಲಕೋಟೆ: ಅಕ್ರಮ ಗಣಿಗಾರಿಕೆ ತಡೆಯಲು ನಿರಂತರ ನಿಗಾ ವ್ಯವಸ್ಥೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ರೀತಿ ನಮ್ಮ ಇಲಾಖೆ ನೌಕರರಿಗೂ ಸಮವಸ್ತ್ರ ಹಾಗೂ ವಾಕಿಟಾಕಿ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆ ಸ್ಥಳಗಳಲ್ಲಿ ಗಸ್ತು ಕಾರ್ಯಕ್ಕೆ ನಿವೃತ್ತ ಯೋಧರನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಗಣಿಗಾರಿಕೆ ವೇಳೆ ಸ್ಪೋಟದಂತಹ ಅನಾಹುತ ತಪ್ಪಿಸಲು ಕಾರ್ಮಿಕರಿಗೆ ಸೂಕ್ತ ತರಬೇತಿ ಅಗತ್ಯವಿದೆ. ಅದಕ್ಕಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ಹಾಗೂ ಚಿತ್ರದುರ್ಗದಲ್ಲಿ ಸ್ಕೂಲ್ ಆಪ್ ಮೈನಿಂಗ್ ಆರಂಭಿಸಲಾಗುವುದು. ಆ ಉದ್ದೇಶಕ್ಕಾಗಿ ಈಗಾಗಲೇ ಸಂಡೂರಿನಲ್ಲಿ 50 ಎಕರೆ ಜಮೀನು ಖರೀದಿಸಲಾಗಿದೆ. ಶೀಘ್ರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗುವುದು ಎಂದು ತಿಳಿಸಿದರು.

ADVERTISEMENT

ಬೆಂಗಳೂರಿನಲ್ಲಿ ಏಪ್ರಿಲ್ 30ರಂದು ನನ್ನ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಗಣಿ ಅದಾಲತ್ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.