ADVERTISEMENT

ಚಕ್ರತೀರ್ಥರಿಂದ ‘ಬರಗೂರು ಗ್ಯಾಂಗ್‌’ ಪದ ಬಳಕೆ: ಡಾ.ಬಿ.ವಿ. ವಸಂತ ಕುಮಾರ್‌ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 1:27 IST
Last Updated 30 ಮೇ 2022, 1:27 IST
ಡಾ.ಬಿ.ವಿ. ವಸಂತ ಕುಮಾರ್‌
ಡಾ.ಬಿ.ವಿ. ವಸಂತ ಕುಮಾರ್‌   

ಚಿತ್ರದುರ್ಗ: ‘ಸಾಹಿತಿ ಬರಗೂರು ರಾಮಚಂದ್ರಪ್ಪ ‘ಎಡ’ವೂ ಅಲ್ಲ, ‘ಬಲ’ವೂ ಅಲ್ಲದ ‘ಮಾನವೀಯ’ ಪಂಥದವರು. ಅವರ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಳಸಿರುವ ‘ಬರಗೂರು ಗ್ಯಾಂಗ್‌’ ಪದ ತಪ್ಪುಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್‌ಭಾನುವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಠ್ಯಪುಸ್ತಕ ಕುರಿತು ಊಹಾಪೋಹದ ಮೇಲೆ ವ್ಯಕ್ತಿ, ಜಾತಿ ನಿಂದನೆ ಚರ್ಚೆ ನಡೆದಿರುವುದು ಒಳ್ಳೆ ಬೆಳವಣಿಗೆಯಲ್ಲ. ಈಗತತ್ವ ವಿಚಾರದ ಮೇಲೆ ನಡೆಯಬೇಕಿದ್ದ ಚರ್ಚೆ ಪಂಥ, ರಾಜಕೀಯ ಸ್ವರೂಪ ಪಡೆದಿದೆ’ ಎಂದರು.

‘ಪಠ್ಯಪುಸ್ತಕಗಳಲ್ಲಿ ಒಂದೇ ಜಾತಿಯ ಲೇಖಕರ ಲೇಖನಗಳನ್ನು ಸೇರಿಸಿರುವುದು ಸರ್ವಥಾ ಸರಿಯಲ್ಲ. ಆ ಕಾರಣಕ್ಕಾಗಿ ಇಡೀ ಪಠ್ಯವನ್ನು ಬ್ರಾಹ್ಮಣ ಪಠ್ಯ, ಆರ್‌ಎಸ್‌ಎಸ್‌ ಪಠ್ಯ ಎನ್ನುತ್ತಿರುವುದು ಬೌದ್ಧಿಕ ದಾರಿದ್ರ್ಯದ ಪ್ರತೀಕ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.