ADVERTISEMENT

15ಕ್ಕೆ ಕೂಡಲಿ ಶ್ರೀಗಳ ವರ್ಧಂತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 19:31 IST
Last Updated 11 ಡಿಸೆಂಬರ್ 2020, 19:31 IST
ಕೂಡಲಿ ಶ್ರೀ
ಕೂಡಲಿ ಶ್ರೀ   

ಶಿವಮೊಗ್ಗ: ತುಂಗಭದ್ರಾ ನದಿಗಳ ಸಂಗಮ ಕ್ಷೇತ್ರ ಕೂಡಲಿ ಶೃಂಗೇರಿ ಸಂಸ್ಥಾನ ಮಠದ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರ 50ನೇ ವರ್ಧಂತಿ ಉತ್ಸವವನ್ನು ಡಿ.15ರಂದು ಹಮ್ಮಿಕೊಳ್ಳಲಾಗಿದೆ.

ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ಮಾರಕ ವೇದಿಕೆಯಲ್ಲಿ ಅತ್ಯಂತ ಸರಳವಾಗಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದ ಕೆಲವು ಧಾರ್ಮಿಕ ಮುಖಂಡರು ಭಾಗವಹಿಸುವರು. ಆಡಳಿತಾಧಿಕಾರಿ ದುರ್ಗದ ಕೇಶವ ಪ್ರಸಾದ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

1970ರಲ್ಲಿ ಜನಿಸಿದ ಶ್ರೀಪಾದ ಅವರು 14ನೇ ವಯಸ್ಸಿನಲ್ಲೇ ಹಿರಿಯ ಶ್ರೀಗಳಾದ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಸ್ವಾಮೀಜಿ ಅವರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.

ADVERTISEMENT

ತುಂಗಾ–ಭದ್ರಾ ಸಂಗಮದ ತಪೋಭೂಮಿಯ ಆದಿ ಗುರು ಶಂಕರಾಚಾರ್ಯ ಪರಂಪರೆಯ ಮಠದ ದೀಕ್ಷೆ ಪಡೆದು 36 ವರ್ಷಗಳಾಗಿವೆ. ಮಠದ ಪೀಠಾಧಿಪತಿಯಾಗಿಭಕ್ತರಿಗೆ ಮಾರ್ಗದರ್ಶನ ನೀಡುವ ಜತೆಗೆ ಶಾರದಾ ದೇವಿಯವರ ನೂತನ ದೇವಾಲಯ ನಿರ್ಮಾಣ, ಭಕ್ತರು, ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಸಮುಚ್ಚಯ, ಕ್ಷೇತ್ರದ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಶ್ರೀಗಳು ಕ್ರಮ ಕೈಗೊಂಡಿದ್ದಾರೆ. ‌ಮಠದ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವಂತೆಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೂ ಕೋರಲಾಗಿದೆ ಎಂದು ಸಂಸ್ಥಾನದ ವಕ್ತಾರ ವೆಂಕಟಸುಬ್ಬು ಮೋಕ್ಷಗುಂಡಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.