ADVERTISEMENT

ವಿಐಟಿ 36ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:22 IST
Last Updated 28 ಸೆಪ್ಟೆಂಬರ್ 2021, 16:22 IST
ಕುಲಪತಿ ಡಾ. ಜಿ. ವಿಶ್ವನಾಥನ್‌
ಕುಲಪತಿ ಡಾ. ಜಿ. ವಿಶ್ವನಾಥನ್‌   

ಬೆಂಗಳೂರು: ವೆಲ್ಲೋರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ವಿಐಟಿ) 36ನೇ ವಾರ್ಷಿಕ ಘಟಿಕೋತ್ಸವ ವರ್ಚುವಲ್‌ ವ್ಯವಸ್ಥೆ ಮೂಲಕ ಮಂಗಳವಾರ ನಡೆಯಿತು.

ಘಟಿಕೋತ್ಸವ ಭಾಷಣ ಮಾಡಿದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)–ಮದ್ರಾಸ್‌ ನಿರ್ದೇಶಕ ಪ್ರೊ. ಭಾಸ್ಕರ್‌ ರಾಮಮೂರ್ತಿ ಅವರು, ’ವಿದ್ಯಾರ್ಥಿಗಳು ಆಳವಾದ ಅಧ್ಯಯನ ಕೈಗೊಳ್ಳಬೇಕು. ಮುಂದಿನ ಮೂವತ್ತು ವರ್ಷಗಳಲ್ಲಿ ದೇಶದಲ್ಲಿ ಅಪಾರ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳನ್ನು ಅವಕಾಶಗಳನ್ನಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳು ಸಜ್ಜಾಗಬೇಕು’ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣ ಮಾಡಿದ ವಿಐಟಿ ಸಂಸ್ಥಾಪಕ ಮತ್ತು ಕುಲಪತಿ ಡಾ. ಜಿ. ವಿಶ್ವನಾಥನ್‌ ಅವರು, ‘ದೇಶದಲ್ಲಿರುವ 14 ಕೋಟಿ ಯುವಕರಲ್ಲಿ ಕೇವಲ 4 ಕೋಟಿ ಯುವಕರಿಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶ ದೊರೆಯುತ್ತಿದೆ’ ಎಂದರು.

ADVERTISEMENT

‘ದೇಶದಲ್ಲಿ ಉನ್ನತ ಶಿಕ್ಷಣವು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಹಣಕಾಸು ಮತ್ತು ಪ್ರಾಧ್ಯಾಪಕರ ಕೊರತೆ ಹಾಗೂ ಉದ್ಯಮಗಳ ಜತೆ ಸಂಪರ್ಕ ಸಾಧಿಸದಿರುವುದು ಸೇರಿದಂತೆ ಹಲವಾರು ಕಾರಣಗಳಿಂದ ಈ ಕ್ಷೇತ್ರದ ಪ್ರಗತಿ ಕುಂಠಿತವಾಗಿದೆ. ಜಪಾನ್‌, ಚೀನಾ, ದಕ್ಷಿಣ ಕೊರಿಯಾ ಅತ್ಯುತ್ತಮ ಉನ್ನತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿವೆ’ ಎಂದು ವಿವರಿಸಿದರು.

‘ಕಳೆದ ವರ್ಷ 844 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ವಿಐಟಿ ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಭಾಗಿಯಾಗಿದ್ದವು’ ಎಂದು ತಿಳಿಸಿದರು.

ವಿವಿಧ ವಿಷಯಗಳಲ್ಲಿ ಪದವಿಗಳನ್ನು ಪೂರ್ಣಗೊಳಿಸಿದ 7569 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಯಿತು.

ವಿಐಟಿ ಉಪಾಧ್ಯಕ್ಷರಾದ ಶಂಕರ್‌ ವಿಶ್ವನಾಥನ್‌, ಡಾ.ಶೇಖರ್‌ ವಿಶ್ವನಾಥನ್‌, ಜಿ.ವಿ. ಸೇಲ್ವಂ, ಕುಲಪತಿ ಡಾ. ರಾಮಬಾನು ಕೊಡಾಳಿ, ಸಮಕುಲಾಧಿಪತಿ ಡಾ.ಎಸ್‌. ನಾರಾಯಣ್‌, ಕುಲಸಚಿವ ಡಾ. ಕೆ. ಸತ್ಯನಾರಾಯಣನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.