ADVERTISEMENT

ಯುವತಿಯನ್ನು ಎಳೆದೊಯ್ದ ಪೊಲೀಸರು

ವಿಧಾನಸೌಧ ಎದುರು ಪ್ರತಿಭಟನೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 20:21 IST
Last Updated 7 ಜನವರಿ 2020, 20:21 IST
ವಿಧಾನಸೌಧ ಎದುರು ಪ್ರತಿಭಟನೆ ನಡೆಸಲು ಯತ್ನಿಸಿದ ಯುವತಿಯನ್ನು ಪೊಲೀಸರು ಎಳೆದುಕೊಂಡು ವಾಹನ ಹತ್ತಿಸಿದರು – ಪ್ರಜಾವಾಣಿ ಚಿತ್ರ 
ವಿಧಾನಸೌಧ ಎದುರು ಪ್ರತಿಭಟನೆ ನಡೆಸಲು ಯತ್ನಿಸಿದ ಯುವತಿಯನ್ನು ಪೊಲೀಸರು ಎಳೆದುಕೊಂಡು ವಾಹನ ಹತ್ತಿಸಿದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲು ಯತ್ನಿಸಿದ್ದ ಯುವತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಎಳೆದೊಯ್ದರು.

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಂಗಳವಾರ ಬೆಳಿಗ್ಗೆ ವಿಧಾನಸೌಧ ಎದುರಿನ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆ, ಕಾಯ್ದೆ ವಿರೋಧಿಸಿ ಘೋಷಣೆ ಕೂಗಲಾರಂಭಿಸಿದರು.

ಯುವತಿಯನ್ನು ಕಂಡ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಹೋಗಿ ವಿಚಾರಿಸಿದ್ದರು. ‘ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಇಲ್ಲಿ ಪ್ರತಿಭಟನೆ ನಡೆಸಬೇಡಿ. ಹೊರಟು ಹೋಗಿ’ ಎಂದು ಯುವತಿಯನ್ನು ಕೋರಿದರು. ಅದಕ್ಕೆ ಒಪ್ಪದ ಯುವತಿ ಪ್ರತಿಭಟನೆ ಮುಂದುವರಿಸಿದ್ದರು.

ADVERTISEMENT

ಅಷ್ಟರಲ್ಲೇ ಹೊಯ್ಸಳ ಗಸ್ತು ವಾಹನ ಸ್ಥಳಕ್ಕೆ ಬಂದಿತ್ತು. ಯುವತಿಯನ್ನು ವಶಕ್ಕೆ ಪಡೆದ ಮಹಿಳಾ ಸಿಬ್ಬಂದಿ ವಾಹನಕ್ಕೆ ಹತ್ತಿಸಲು ಯತ್ನಿಸಿದರು. ವಾಹನ ಹತ್ತುವುದಿಲ್ಲವೆಂದು ಯುವತಿ ಪಟ್ಟು ಹಿಡಿದಿದ್ದಳು. ಆಗ ಸಿಬ್ಬಂದಿ, ಯುವತಿಯನ್ನು ಎಳೆದುಕೊಂಡು ವಾಹನದಲ್ಲಿ ಹತ್ತಿಸಿದರು.

‘ಯುವತಿ ಘೋಷಣೆ ಕೂಗುತ್ತಲೇ ಇದ್ದರು. ಅವರನ್ನು ಪೊಲೀಸರು ಹಿಡಿದುಕೊಂಡು ಹೋದರು. ಹೆಸರು ಗೊತ್ತಾಗಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.